ಮೂಡುಬಿದಿರೆ : ಮೂಡುಬಿದಿರೆಯ ‘ಯಕ್ಷಸಂಗಮ’ ರಜತ ಸಂಭ್ರಮವನ್ನು ಆಚರಿಸುತ್ತಿದ್ದು ಇದರ ಅಂಗವಾಗಿ 25 ನೇ ವರ್ಷದ ಯಕ್ಷಗಾನ ಮತ್ತು ತಾಳಮದ್ದಳೆ ಕೂಟ ಹಾಗೂ ಸಂಮಾನ ಸಮಾರಂಭವು 10 ಆಗಸ್ಟ್ 2024ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.
ಮೂಡುಬಿದಿರೆಯ ಜೈನಮಠದ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಒರಿಸ್ಸಾದ ಟಾಟಾ ರಿಫ್ರಾಕ್ಟರೀಸ್ ಲಿಮಿಟೆಡ್ ಇದರ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸಿ. ದೇವದಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ ಘಂಟೆ 4.30ರಿಂದ ‘ಯಕ್ಷನಿಧಿ’ ಮೂಡುಬಿದಿರೆ ಮಕ್ಕಳ ಮೇಳದಿಂದ ‘ದಕ್ಷಾದ್ವರ’ ಹಾಗೂ ರಾತ್ರಿ ಘಂಟೆ 8.15 ರಿಂದ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ ಘಂಟೆ 6.45 ರಿಂದ ಕರ್ನಾಟಕ ರಾಘ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಇವರಿಗೆ ಸಂಮಾನ ನಡೆಯಲಿದೆ. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಡಾ. ಶ್ಯಾಮ ಭಟ್, ಡಾ. ಮೋಹನ ಆಳ್ವ, ಡಾ. ಪದ್ಮನಾಭ ಕಾಮತ್, ಕೆ. ಶ್ರೀಪತಿ ಭಟ್, ಎಂ. ವಿಜಯ ಶೆಣೈ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಘಂಟೆ 9.30ರಿಂದ ಬೆಳಗ್ಗೆ ಘಂಟೆ 6.00ರವರೆಗೆ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ನಡೆಯಲಿದೆ ಎಂದು ಯಕ್ಷಸಂಗಮದ ಸಂಚಾಲಕ ಎಂ. ಶಾಂತರಾಮ ಕುಡ್ವ ತಿಳಿಸಿದ್ದಾರೆ.