Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಬಾರ್ಯದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ

    February 7, 2026

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಕುಂದಾಪುರ ಸರಕಾರಿ ಕಾಲೇಜಿನಲ್ಲಿ ‘ಪುಂಡಲೀಕ ಹಾಲಂಬಿ ದತ್ತಿ ಪ್ರಶಸ್ತಿ ಪ್ರದಾನ | ಫೆಬ್ರವರಿ 14

    February 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ
    Theatre

    ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

    August 13, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಐಚ್ಛಿಕ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ 2 ಆಗಸ್ಟ್ 2024ರಂದು ನಡೆಯಿತು.
    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಂಗಭೂಮಿ ಕಲಾವಿದೆ ಹಾಗೂ ‘ನೀನಾಸಂ’ ಇದರ ಹಿರಿಯ ವಿದ್ಯಾರ್ಥಿನಿಯಾದ ಸಂಗೀತಾ ಭಿಡೆ ಮಾತನಾಡಿ “ಅಭಿನಯ, ರಂಗತಂತ್ರ, ನಾಟಕ ಸಂಗೀತ ಹಾಗೂ ತಂತ್ರಜ್ಞಾನ ಇಂತಹ ವಿವಿಧ ಅಂಶಗಳನ್ನು ಹೊಂದಿರುವುದೇ ರಂಗಭೂಮಿ. ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೊದಲು ಇದಕ್ಕೆ ರಂಗಭೂಮಿ ಎಂದು ಹೆಸರಿರಲಿಲ್ಲ, ಕಾಲಕ್ರಮೇಣ ಈ ಹೆಸರು ಬಂದಿದೆ. ಒಂದು ಲಕ್ಷ ವರ್ಷದ ಹಿಂದೆ ಮಾನವನ ಉಗಮವಾಗಿದೆ. ಭಾಷೆ ಇರದಿದ್ದ ಕಾಲದಲ್ಲಿ ಮಾನವ ತಾನು ಬೇಟೆಯಾಡಿದ ರೀತಿಯನ್ನು ಮನೋರಂಜನೆಗಾಗಿ ತನ್ನ ಕುಟುಂಬಸ್ಥರ ಜೊತೆ ಅಭಿನಯಿಸುತ್ತ ಹೇಳಿಕೊಳ್ಳಲು ಪ್ರಾರಂಭಿಸಿದ. ಈ ರೀತಿ, ನಟನೆಗೆ ಹಲವಾರು ವರ್ಷಗಳ ಇತಿಹಾಸ ಇದೆ. ಹಿಂದೆ ಗ್ರೀಕ್ ಹಾಗೂ ರೋಮನ್ ನಾಗರಿಕತೆಯ ಸಮಯದಲ್ಲಿ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು. ಇವರ ಸಮಯದಲ್ಲಿ ರಾಜಭವನದಲ್ಲಿ 500 ರಿಂದ 700 ಜನರಿಗೆ ನಾಟಕ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿತ್ತು.
    ಭರತನ ನಾಟ್ಯಶಾಸ್ತ್ರವು ನಾಟಕಕ್ಕೆ ಸಂಬಂಧಿಸಿದೆ. ನಾಟ್ಯ (ನಟನೆ) ಮತ್ತು ನೃತ್ಯ ಸೇರಿ ನಾಟಕವಾಯಿತು. ಭಾಸ, ಕಾಳಿದಾಸ, ಶೂದ್ರಕ ಹಾಗೂ ವಿಶಾಖದತ್ತ ಇಂತಹ ಅನೇಕ ಶ್ರೇಷ್ಠ ನಾಟಕಗಾರರು ಉಗಮಗೊಂಡರು. ಇಂತಹ ಮಹಾಕವಿಗಳು ನಾಟಕಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದ್ದಾರೆ. ಕ್ರಿ. ಶ. 19ನೇ ಶತಮಾನದ ನಂತರ ಜನಪದ ರಂಗಭೂಮಿ ಸ್ಥಾಪನೆಯಾಯಿತು. ಇದರಲ್ಲಿ ಜನರಿಂದ ಜನರಿಗೆ ಹರಡುವ ಕಥೆಗಳು, ಪುರಾಣಗಳು, ಲೋಕಧರ್ಮದಂತಹ ಕಥೆ ಆರಿಸಿಕೊಳ್ಳುತ್ತಿದ್ದರು. ಇದರ ನಂತರ ನಾಟಕವು ವೃತ್ತಿ (ವೃತ್ತಿ ರಂಗಭೂಮಿ)ಯಾಗಿ ಬದಲಾಯಿತು. ತದನಂತರ ರಂಗತಂತ್ರಗಳು, ದೃಶ್ಯ ಮಾಧ್ಯಮ (ಪರದೆ) ಬಳಕೆ ಆರಂಭವಾಯಿತು. ಕ್ರಮೇಣ ನಾಟಕ ಸಂಘಗಳು ಪ್ರಾರಂಭವಾದವು. ಮೊದಮೊದಲು ನಾಟಕಕ್ಕೆ ಮಹಿಳೆಯರು ಬರುತ್ತಿರಲಿಲ್ಲ. ಹಾಗಾಗಿ ಸ್ತ್ರೀ ವೇಷಗಳನ್ನು ಪುರುಷರೇ ಮಾಡುತ್ತಿದ್ದರು. ‘ನೀನಾಸಂ’ ತರಬೇತಿ ಕೇಂದ್ರದಲ್ಲೂ ಇದೇ ಸ್ಥಿತಿ ಇತ್ತು. ಕಾಲ ಕ್ರಮೇಣ ಮಹಿಳೆಯರು ನಟನೆ ತರಬೇತಿಗೆ ಬರಲು ಆರಂಭಿಸಿದರು.” ಎಂದು ವಿವರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ವಹಿಸಿದ್ದರು. ವಿದ್ಯಾರ್ಥಿನಿ ಅಮೃತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ. ರಾಜಶೇಖರ್ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಖ್ಯಾತ ತುಳು ರಂಗಭೂಮಿ ನಟ ಅಶೋಕ್ ಶೆಟ್ಟಿ ಅಂಗ್ಲಮೊಗರು ನಿಧನ
    Next Article ಪಾತಾಳ ವೆಂಕಟರಮಣ ಭಟ್ ಇವರಿಗೆ ‘ಶೇಣಿ ಪ್ರಶಸ್ತಿ’ | ಆಗಸ್ಟ್ 15
    roovari

    Comments are closed.

    Related Posts

    ಪಾಂಬೂರು ಪರಿಚಯ ಪ್ರತಿಷ್ಠಾನದ ‘ರಂಗೋತ್ಸವ -2026’ | ಫೆಬ್ರವರಿ 8ರಿಂದ 14

    February 7, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಎನ್.ಐ.ಟಿ.ಕೆ.ಯಲ್ಲಿ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರ | ಫೆಬ್ರುವರಿ 4ರಿಂದ 8  

    February 3, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.