Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅರಸಿನಮಕ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕಕ್ಕೆ ಚಾಲನೆ
    Literature

    ಅರಸಿನಮಕ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕಕ್ಕೆ ಚಾಲನೆ

    August 29, 2024Updated:August 28, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಮಕ್ಕಳಿಗೆ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕದ ರಚನಾ ಪ್ರಕ್ರಿಯೆಗೆ ಚಾಲನೆ ಕಾರ್ಯಕ್ರಮವು 23 ಆಗಸ್ಟ್ 2024ರಂದು ನಡೆಯಿತು.
    ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಹಿರಿಯ ಸಹಕಾರಿಗಳು ಹಾಗೂ ಸಾಹಿತ್ಯ ಸಾಂಸ್ಕೃತಿಕ ಸಂಘಟಕರಾದ ಶ್ರೀಕರ ರಾವ್ ಅಡ್ಕಾರಿ ಇವರು  ದೀಪ ಬೆಳಗಿಸಿ ಚಾಲನೆ ನೀಡಿ “ಅರಸಿನಮಕ್ಕಿಯಂತಹ ಹಳ್ಳಿ ಪ್ರದೇಶದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿ.” ಎಂದು ಶುಭಹಾರೈಸಿದರು.
    ಮುಖ್ಯ ಅತಿಥಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ದ. ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ  “ಅರಸಿನಮಕ್ಕಿಯಲ್ಲಿ ಈ ದಿನ ಚಾಲನೆ ನೀಡುವ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕವು ಊರಿನ ಮತ್ತು ಶಾಲಾ ಮಕ್ಕಳ ಸಾಹಿತ್ಯ ಪ್ರತಿಭೆಗೆ ವೇದಿಕೆಯಾಗಲಿ. ಸಾಹಿತ್ಯಿಕ ಅಭಿರುಚಿ ಮತ್ತು ರಚನೆಯ ಮೂಲಕ ಸುಸಂಸ್ಕೃತ ಸಮಾಜ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಲಿ. ಈ ಮೂಲಕ ಅರಸಿನಮಕ್ಕಿ ಪ್ರದೇಶದ ಜನರ ಒಗ್ಗಟ್ಟು ಬಲವಾಗಲಿ.” ಎಂದು ಆಶಿಸಿದರು. ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಸುಧೀರ್ ಘಟಕದ ಯೋಜನೆಗಳು ಮತ್ತು ಸಾಹಿತ್ಯಿಕ ಚಟುವಟಿಕೆಗಳ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
    ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಪ್ರಸ್ತಾವನೆಯ ಮೂಲಕ ಸಾಹಿತ್ಯ ಪ್ರೇರಣೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ತಿನ ಮಾಜಿ ಸದಸ್ಯರಾದ ಶ್ರೀಮತಿ ಮಂಜುಳಾ ಕಾರಂತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ. ಯದುಪತಿ ಗೌಡ ಹೋಬಳಿ ಘಟಕದ  ನಿಯೋಜಿತ ಅಧ್ಯಕ್ಷರಿಗೆ ಕನ್ನಡದ ಶಾಲು ನೀಡಿ ಘಟಕದ ರಚನಾ ಪ್ರಕ್ರಿಯೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಸಮಾರಂಭದ ಮೊದಲು ರಾಮಕೃಷ್ಣ ಭಟ್ ಚೊಕ್ಕಾಡಿಯವರು ಮಕ್ಕಳಿಗೆ ಸಾಹಿತ್ಯ ರಚನೆಯ ಕಾರ್ಯಾಗಾರವನ್ನು ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಕ್ಕಳು ಕವನ ಹಾಗೂ ಕಥೆಗಳನ್ನು ರಚಿಸಿ ವಾಚನವನ್ನೂ ಮಾಡಿದರು
    ಮುಖ್ಯೋಪಾಧ್ಯಾಯರಾದ ಚಂದ್ರ ಇವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಮಂಜುಳಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಎಡ್ಡಿ ಸಿಕ್ವೇರಾ ವಿರಚಿತ ’ನವ್- ರಂಗ್’ ನಾಟಕ ಕೃತಿ ಲೋಕಾರ್ಪಣೆ | ಆಗಸ್ಟ್ 31
    Next Article ಬಲಮುರಿ ಶ್ರೀವಿದ್ಯಾ ಗಣಪತಿ ದೇವಸ್ಥಾನದಲ್ಲಿ ‘ಸೌಗಂಧಿಕಾ ಪುಷ್ಪ ಹರಣ’ ಯಕ್ಷಗಾನ ತಾಳಮದ್ದಳೆ
    roovari

    Comments are closed.

    Related Posts

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು

    February 21, 2026

    ಕೊಡವ ಸಾಹಿತ್ಯ ಅಕಾಡೆಮಿಯಿಂದ 15 ಸಾಧಕರಿಗೆ ಗೌರವ ಪ್ರಶಸ್ತಿ

    February 21, 2026

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.