ಬೆಂಗಳೂರು : ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ತನ್ನ 8ನೇ ಆವೃತ್ತಿಯ ವಿದ್ಯಾರ್ಥಿಗಳ ಘಟಿಕೋತ್ಸವ ಹಾಗೂ 9ನೇ ಆವೃತ್ತಿಯ ವಿದ್ಯಾರ್ಥಿಗಳ ಮೊದಲನೇ ಸೆಮಿಸ್ಟರ್ ನ ಕಲಿಕಾ ಭಾಗವಾಗಿ ಪ್ರಸ್ತುತ ಪಡಿಸಲಿರುವ ಶಾಂತಾ ಗಾಂಧಿ ವಿರಚಿತ ‘ಜಸ್ಮಾ ಓಡನ್’ ನಾಟಕವನ್ನು ಖ್ಯಾತ ರಂಗ ನಿರ್ದೇಶಕಿ ಡಾ. ಬಿ . ಜಯಶ್ರೀಯವರ ನಿರ್ದೇಶನದಲ್ಲಿ ದಿನಾಂಕ 04-09-2024ರಿಂದ 06-09-2024ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದ ಸಮುಚ್ಛಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನದ ವಿವರಗಳು:
4ನೇ ಸೆಪ್ಟೆಂಬರ್ 2024ರಂದು ಸಂಜೆ 7-00 ಗಂಟೆಗೆ (ಸಂಜೆ 5-30 ಘಟಿಕೋತ್ಸವ)
5 ಹಾಗೂ 6ನೇ ಸೆಪ್ಟೆಂಬರ್ ಪ್ರತಿದಿನ ಮಧ್ಯಾಹ್ನ 3-30 ಮತ್ತು ಸಂಜೆ 7-00 ಗಂಟೆಗೆ
ನಾಟಕ – ‘ಜಸ್ಮಾ ಓಡನ್’
ರಚನೆ – ಶಾಂತಾ ಗಾಂಧಿ
ಕನ್ನಡ ಅನುವಾದ – ವೈಶಾಲಿ ಕಾಸರವಳ್ಳಿ
ರಂಗಸಜ್ಜಿಕೆ – ಶಶಿಧರ ಅಡಪ
ಸಂಗೀತ, ಪರಿಕಲ್ಪನೆ, ನಿರ್ದೇಶನ – ಡಾ. ಬಿ. ಜಯಶ್ರೀ
ಸ್ಥಳ – ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗ, ಬೆಂಗಳೂರು – 560056 ಪ್ರವೇಶ ದರ – 1೦೦ ರೂಪಾಯಿಗಳು.
ಟಿಕೆಟ್ ದೊರೆಯುವ ಸ್ಥಳ – ಪ್ರದರ್ಶನದ ದಿನ 1-00 ಗಂಟೆ ಮುಂಚೆ ರಂಗಮಂದಿರದಲ್ಲಿ ಹಾಗೂ ಬೆಳಿಗ್ಗೆ 9-30ರಿಂದ ಸಂಜೆ 6-00 ಗಂಟೆ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಕಛೇರಿಯಲ್ಲಿ.