Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿರಿಬಾಗಿಲಿನಲ್ಲಿ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ಗೌರವ ಗಾನ ನಮನ
    Felicitation

    ಸಿರಿಬಾಗಿಲಿನಲ್ಲಿ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ಗೌರವ ಗಾನ ನಮನ

    September 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 31 ಆಗಸ್ಟ್ 2024ನೇ ಶನಿವಾರ ಶ್ರೀ ಧರ್ಮಸ್ಥಳ ಶಿಕ್ಷಣ ಕ್ಷೇತ್ರದ ಕಾರ್ಯದರ್ಶಿ, ಧರ್ಮಸ್ಥಳ ಮೇಳದ ಯಜಮಾನರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ‘ಗೌರವ ಗಾನ ನಮನ’ ಸಲ್ಲಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಇವರು ಮಾತನಾಡಿ “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇದೊಂದು ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ. ಯಕ್ಷಗಾನದ ಅಧ್ಯಯನಕ್ಕೆ ಬೇಕಾಗುವ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆ ಹಸ್ತಾಂತರಿಸುವ ಪ್ರತಿಷ್ಠಾನದ ಸಂಕಲ್ಪ ಯಶಸ್ವಿಯಾಗಲಿ. ಮುಂದೆ ಇದೊಂದು ಪ್ರವಾಸೋದ್ಯಮದ ಕೇಂದ್ರವಾಗಿ ಮೆರೆಯಲಿ. ಸತತ 35 ವರ್ಷ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ಭಾಗವತಿಗೆ ಮಾಡುತ್ತಾ ಬಂದಿರುವ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರ ಸಾಧನೆ ಮೆಚ್ಚುವಂತದ್ದು, ತನ್ನ ಕಾರ್ಯಕ್ಷೇತ್ರದ ಬಗ್ಗೆ ಅಪಾರ ಗೌರವ, ಕಾಳಜಿಯಿಂದ ಕಾರ್ಯತತ್ಪರರಾದ ಬೆರಣಿಕೆಯ ಕಲಾವಿದರಲ್ಲಿ ಶ್ರೀ ಮಯ್ಯರು ಒಬ್ಬರು. ಛಲವಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀ ಮಂಜುನಾಥ ಸ್ವಾಮಿ ಮಹಾಗಣಪತಿಯು ಸದಾ ಅನುಗ್ರಹಿಸಲಿ” ಎಂದು ಶುಭ ಹಾರೈಸಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆರು ಮೇಳಗಳ ಯಜಮಾನರಾದ ಶ್ರೀ ಕಿಶನ್ ಹೆಗ್ಡೆ ಪಳ್ಳಿ ಇವರು ಮಾತನಾಡಿ “ಸಿರಿಬಾಗಿಲು ಮ್ಯೂಸಿಯಂ ಇದು ಕೇವಲ ಅದ್ಬುತವಲ್ಲ ಅತ್ಯದ್ಬುತ. ಮಯ್ಯ ಭಾಗವತರ ದುಡಿಮೆಯ ಫಲ ಎದ್ದು ಕಾಣುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಒಂದು ಕಲಾವಲಯದ ಬೆಳವಣಿಗೆಗಾಗಿ ವೃತ್ತಿ ಕಲಾವಿದರಾಗಿ ಶ್ರಮಿಸಿದ ಮಹಾ ಕಲಾವಿದ ಇವರು” ಎಂದು ಬಣ್ಣಿಸಿದರು.

    ಮಧೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯದೇವ ಖಂಡಿಗೆ, ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವುಮಠ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಶ್ರೀ ಕೆ. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆಯವರನ್ನು ಅಭಿನಂದಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರಾದ ಶ್ರೀ ಮುಖೇಶ್ ನೇತೃತ್ವದಲ್ಲಿ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರನ್ನು ಗೌರವಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ಮನೆಯೇ ಗ್ರಂಥಾಲಯ’ ಕಾರ್ಯಕ್ರಮದ ಶತ ಸಂಭ್ರಮ | ಸೆಪ್ಟೆಂಬರ್ 3
    Next Article ಕಲಾಗ್ರಾಮದ ಸಮುಚ್ಛಯ ಭವನದಲ್ಲಿ ನಾಟಕ ಪ್ರದರ್ಶನ | ಸೆಪ್ಟೆಂಬರ್ 4ರಿಂದ 6
    roovari

    Comments are closed.

    Related Posts

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15

    February 14, 2026

    ಯಕ್ಷಗಾನ ಕೇಂದ್ರದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’

    February 14, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.