ಬೆಂಗಳೂರು : ಕನ್ನಡ ಯುವಜನ ಸಂಘ (ರಿ.) ಇದರ ವತಿಯಿಂದ ಡಾ. ಎಸ್.ಎಲ್. ಭೈರಪ್ಪರವರ ‘ಪರ್ವ’ ಕಾದಂಬರಿಯ ಒಂದು ವಿಶ್ಲೇಷಣೆಯನ್ನು ದಿನಾಂಕ 19 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಕನ್ನಡ ಯುವಜನ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಲೇಖಕರು, ಕಲಾವಿದರು ಹಾಗೂ ಖ್ಯಾತ ವಕೀಲರಾದ ಶ್ರೀ ನೊಣವಿನಕೆರೆ ರಾಮಕೃಷ್ಣಯ್ಯ ಇವರು ಉಪನ್ಯಾಸ ನೀಡಲಿದ್ದು, ಕನ್ನಡ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ರೆಡ್ಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮಹಾಂತೇಶ ದೇಗಾವಿ ಇವರು ಪ್ರಸ್ತಾವನೆ ನೀಡಲಿದ್ದಾರೆ.