ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ಸಂಸ್ಕೃತ ವಿಭಾಗವು ಆಯೋಜಿಸಿದ ‘ಸಂಸ್ಕೃತೋತ್ಸವ’ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ “ಸಂಸ್ಕೃತ ಭಾಷೆಯ ಮಹತ್ವ ಹಾಗೂ ಭಾಷೆಯ ರಕ್ಷಣೆ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಸಂಸ್ಕೃತ ಮಹಾ ವಿದ್ಯಾಲಯದ ವೇದಾಂತ ವಿಭಾಗದ ಪ್ರಾಧ್ಯಾಪಕ ಪ್ರೊ. ಷಣ್ಮುಖ ಹೆಬ್ಬಾರ್ ಮಾತನಾಡಿ “ಪ್ರಾಚೀನವಾದ ಸಂಸ್ಕೃತ ಭಾಷೆಯನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಸಂಸ್ಕೃತ ಭಾಷೆಯನ್ನು ದಿನ ನಿತ್ಯದ ಸಂವಹನದಲ್ಲಿ ಅಳವಡಿಸಿಕೊಂಡರೆ ಭಾಷೆಯ ರಕ್ಷಣೆಯಾಗುತ್ತದೆ.” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ವೆಂಕಟರಮಣ ಭಟ್ ಮಾತನಾಡಿ “ಬಹಿರಂಗದ ಆಚರಣೆಗಳಿಗಿಂತ ಅಂತರಂಗದ ಚಿಂತನೆಗಳಿಂದ ಸುಂಸ್ಕೃತರಾಗಬೇಕು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಸಂಸ್ಕೃತ ಭಾಷೆಗೆ ವಿಶ್ವದಲ್ಲೇ ಉನ್ನತ ಸ್ಥಾನಮಾನವಿದ್ದು ಭಾರತೀಯ ಪುರಾಣ, ಪರಂಪರೆ, ವೈದ್ಯಕೀಯ ಚಿಕಿತ್ಸಾ ಪದ್ದತಿ, ವೈಜ್ಞಾನಿಕ ವಿಚಾರಗಳ ಅಧ್ಯಯನಕ್ಕೆ ಸಂಸ್ಕೃತ ಭಾಷಾ ಸಾಮರ್ಥ್ಯದ ಅಗತ್ಯವಿದೆ.” ಎಂದರು.
ವಿದ್ಯಾರ್ಥಿಗಳಾದ ಸುಪ್ರೀತ್ ಮತ್ತು ಮೃದುಲಾ ಸಂಸ್ಕೃತ ಭಾಷಣಗೈದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ನಟರಾಜ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಅನನ್ಯ ಮತ್ತು ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಸಂದೀಪ್ ಆಚಾರ್ಯ ವಂದಿಸಿದರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಸಾಹಿತ್ಯ ಸಂಘದ ಸಂಯೋಜಕ ಕುಮಾರ್ ಮಾದರ್ ಉಪಸ್ಥಿತರಿದ್ದರು. ಸಂಸ್ಕೃತೋತ್ಸವದ ಪ್ರಯುಕ್ತ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಂಸ್ಕೃತ ರೂಪಕ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು.
Subscribe to Updates
Get the latest creative news from FooBar about art, design and business.
Previous Articleಶಕ್ತಿನಗರದ ಕಲಾಂಗಣದಲ್ಲಿ ಸಂಗೀತ ಸುಧೆ ಹರಿಸಿದ ‘ಸಂಗೀತ ಸಂಧಿ’
Related Posts
Comments are closed.