Subscribe to Updates

    Get the latest creative news from FooBar about art, design and business.

    What's Hot

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಕೆ. ಶಿವರಾಮಕಾರಂತರ 122ನೆಯ ಜನ್ಮದಿನಾಚರಣೆ
    Literature

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಕೆ. ಶಿವರಾಮಕಾರಂತರ 122ನೆಯ ಜನ್ಮದಿನಾಚರಣೆ

    October 11, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಕೆ. ಶಿವರಾಮಕಾರಂತರ 122ನೆಯ ಹುಟ್ಟಹಬ್ಬವನ್ನು ದಿನಾಂಕ 10 ಅಕ್ಟೋಬರ್ 2024ರಂದು ಆಚರಿಸಲಾಯಿತು.
    ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ತಮ್ಮ ಬದುಕಿಗೆ ಯಾವುದೇ ಸೀಮಿತ ಪರಿಧಿಗಳನ್ನು ವಿಧಿಸಿಕೊಳ್ಳಲು ಬಯಸದ ಕಾರಂತರಿಗೆ ಜ್ಞಾನದ ಎಲ್ಲ ಶಾಖೆಗಳೂ ಹತ್ತಿರವಾಗಿ ಕಂಡವು, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಶಿವರಾಮ ಕಾರಂತರು ರೂಪಿಸಿದ ‘ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ ಯೋಜನೆಗಳು ವಿಶ್ವವಿದ್ಯಾಲಯಗಳಿಗೆ ಮಾತ್ರ ಸಾಧ್ಯವಿರುವಂತದ್ದು, ಇಂತಹದ್ದನ್ನು ಒಬ್ಬರೇ ಕೈಗೊಂಡು ಸಾಧಿಸಿದರು. ಸಿರಿಗನ್ನಡ ಅರ್ಥಕೊಶವನ್ನು ತಯಾರಿಸಿದರು. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದರು. ಸ್ವತಃ ಹಲವು ಪ್ರಯೋಗಗಳನ್ನು ನಡೆಸಿದರು. ಶಿಲ್ಪಕಲೆ, ಚಿತ್ರಕಲೆಗಳ ಕುರಿತಾದ ಪುಸ್ತಕಗಳನ್ನು ಬರೆದರು. ಸ್ವತಃ ಚಿತ್ರ ರಚನೆಯನ್ನೂ ಮಾಡಿದರು. ಚಲನಚಿತ್ರ ನಿರ್ಮಿಸಿದರು, ನಿರ್ದೇಶಿಸಿದರು. ನಾಟಕ, ಯಕ್ಷಗಾನಗಳಲ್ಲಿ ನಟಿಸಿದರು. ನಲವತ್ತಕ್ಕೂ ಹೆಚ್ಚು ಕಾದಂಬರಿಗಳು, ಹಲವಾರು ಪ್ರವಾಸ ಕಥನಗಳು, ಆತ್ಮ ಚರಿತ್ರೆಯನ್ನೂ ಬರೆದರು. ‘ಪ್ರಾಣಿ ಪ್ರಪಂಚದ ವಿಸ್ಮಯಗಳು’ ಅವರು 90 ವರ್ಷದ ಸಮೀಪದಲ್ಲಿದ್ದಾಗ ಪ್ರಕಟವಾದ ಕೃತಿ. ಒಂದು ಕಾಲದಲ್ಲಿ ಅವರು ತಮ್ಮ ಪುಸ್ತಕಗಳಿಗೆ ತಾವೇ ಪ್ರಕಾಶಕರೂ, ವಿನ್ಯಾಸಕರೂ, ಮುದ್ರಕರೂ, ಮಾರಾಟಗಾರರೂ ಆಗಿದ್ದರು ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕಾರಂತರು ಪ್ರವೇಶಿಸದ ಕ್ಷೇತ್ರಗಳೇ ಇಲ್ಲ. ಕಾರಂತರ ಜೊತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿ ಕೊಂಡ ನಾಡೋಜ ಡಾ. ಮಹೇಶ ಜೋಶಿಯವರು ಡಾ.ವಿ. ಕೃ. ಗೋಕಾಕರಿಗೆ ಜ್ಞಾನಪೀಠ ಬಂದಾಗ ಕಾರಂತರು ಅವರನ್ನು ಸಂದರ್ಶಿಸಿದ ವಿಶೇಷ ಪ್ರಸಂಗವನ್ನು ದಾಖಲಿಸುವ ಅವಕಾಶ ತಮಗೆ ದೊರಕಿದ್ದು ಅದೃಷ್ಟವೆಂದು ಹೇಳಿ ಕಾರಂತರ ಪ್ರತಿ ಭೇಟಿಯೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ಬೆಳೆಸಿತು. ಕಾರಂತರ ಲೋಕದೃಷ್ಟಿ ಅಸಾಧಾರಣವಾದದ್ದು. ಅವರ ನಿಷ್ಠೆ ಕೇವಲ ಒಂದು ಮನುಷ್ಯ ಸಮೂಹಕ್ಕಾಗಲಿ, ಒಂದು ನಿರ್ದಿಷ್ಟ ಭೌಗೋಳಿಕ ಪರಿಸರಕ್ಕಾಗಲೀ ಸೀಮಿತವಾಗಿರಲಿಲ್ಲ. ಇಡೀ ಬ್ರಹ್ಮಾಂಡವನ್ನು ಒಳಗೂಳ್ಳುವ ಉದಾರವಾದ ಮನಸ್ಸು ಕಾರಂತರದ್ದು.” ಎಂದು ಹೇಳಿದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿ ಮಾತನಾಡಿ “ಕನ್ನಡ ಕಾದಂಬರಿ ಲೋಕಕ್ಕೆ ವಾಸ್ತವದ ನೆಲೆ ನೀಡಿದ ಹೆಗ್ಗಳಿಕೆ ಕಾರಂತರದು. ವಿಕಾಸದ ಆದರ್ಶ ಇಡೀ ಒಂದು ಸಮುದಾಯದ ದೃಷ್ಟಿಯಿಂದ ದೂರದ ಕನಸಾಗಿ ಕಂಡರೂ ವೈಯಕ್ತಿಕ ಮಟ್ಟದಲ್ಲಿ ಅದು ಅಸಾಧ್ಯವಲ್ಲ ಎನ್ನುವುದು ಅವರ ಕಾದಂಬರಿಗಳು ತೋರಿಸಿಕೊಡುತ್ತವೆ. ಅಂತೆಯೇ ಈ ದೃಷ್ಟಿ ಒಟ್ಟು ಕಾದಂಬರಿಯ ಆಶಯದಲ್ಲಿ ಅಲ್ಲಿನ ಕೆಲವೊಂದು ಪಾತ್ರಗಳ ಶೀಲದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಕಾರಂತರ ಆತ್ಮ ಚರಿತ್ರೆಯಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಮತ್ತು ‘ಸ್ಮೃತಿ ಪಟಲದಿಂದ ಭಾಗ 1,2 ,3 ಕಾರಂತರು ಬೆಳೆದು ಬಂದ ಕ್ರಮವನ್ನೂ ಅವರ ಆಶಯ, ಪ್ರೇರಣೆಗಳನ್ನೂ ಖಚಿತವಾಗಿ ನಿರೂಪಿಸುತ್ತವೆ. ಕಾರಂತರ ಪ್ರವಾಸ ಗ್ರಂಥಗಳಾದ ‘ಅಬೂನಿಂದ ಬರಾಮಕ್ಕೆ’, ‘ಅಪೂರ್ವ ಪಶ್ಚಿಮ’, ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಮುಂತಾದ ಕೃತಿಗಳಲ್ಲಿ ನಮಗೆ ಒದಗುವ ಮಾಹಿತಿ, ಹುಟ್ಟಿಸುವ ಕುತೂಹಲ ವಿಶಿಷ್ಟವಾದದ್ದು. ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ, ಸಾಂಸ್ಕೃತಿಕ ವಿವರಗಳು, ಅಲ್ಲಿನ ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದನ್ನೂ ಕಾರಂತರ ಕಣ್ಣುಗಳು ತಪ್ಪಿಸಿಕೊಳ್ಳುವುದಿಲ್ಲ.” ಎಂದು ಹೇಳಿದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಭಾಸ್ಕರ್ ಕೊಗ್ಗ ಕಾಮತ್‌ರಿಗೆ ‘ಹೆರಿಟೇಜ್ ಪ್ರಶಸ್ತಿ’
    Next Article ‘ಕ್ಯಾನ್ ಲಿಟೆರಾತಿ ಫೆಸ್ಟ್ 2024’ – ಮಂಗಳೂರಿನಲ್ಲಿ ಮಕ್ಕಳ ಸಾಹಿತ್ಯೋತ್ಸವ
    roovari

    Add Comment Cancel Reply


    Related Posts

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.