ಬೆಂಗಳೂರು : ‘ವಿಜಯನಗರ ಬಿಂಬ’ದ ಅನೇಕ ಹಿರಿಯ ವಿಧ್ಯಾರ್ಥಿಗಳು ಡಿಪ್ಲೊಮಾ ಪದವಿ ಪಡೆದ ನಂತರ, ‘ಥೇಮಾ’ ತಂಡದ ಅನೇಕ ಯಶಸ್ವಿ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ರಂಗಭೂಮಿಯ ವಿವಿಧ ಆಯಾಮಗಳಲ್ಲಿ ರಂಗಶಿಕ್ಷಣ ಪಡೆದವರಿಗೆ ಆಯಾಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಲ್ಲಿ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಿದೆ ‘ಥೇಮಾ’. ವಿಜಯನಗರ ಬಿಂಬದ ಅನೇಕ ಹಿರಿಯ ವಿಧ್ಯಾರ್ಥಿಗಳು ನಾಟಕಕಾರರಾಗಿ, ರಂಗಸಜ್ಜಿಕೆ, ರಂಗಪರಿಕರ ವಿನ್ಯಾಸಕರಾಗಿ, ಬೆಳಕು ವಿನ್ಯಾಸಕರಾಗಿ ಹಾಗೂ ಯಶಸ್ವಿ ಕಲಾವಿದರಾಗಿ ರೂಪುಗೊಳ್ಳಲು, ಅಲ್ಲದೆ ಹಲವರು ಶಾಲೆಗಳಲ್ಲಿ ರಂಗಭೂಮಿಯ ಶಿಕ್ಷಕರಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುವ ಮೂಲಕ ‘ಥೇಮಾ’ ರಂಗಭೂಮಿಯಲ್ಲಿ ಸಕ್ರಿಯವಾಗಿದೆ.
‘ಥೇಮಾ’ ತಂಡದಿಂದ ಕಾರ್ಪೊರೇಟ್ ಕಂಪನಿಗಳಲ್ಲಿ, ಅನೇಕ ಎನ್.ಜಿ.ಒ. ಸಂಸ್ಥೆಗಳಿಗೆ ರಂಗಕಾರ್ಯಾಗಾರವನ್ನು ನಡೆಸುತ್ತಿದೆ. ಈ ಸಂಸ್ಥೆಯ ರೂವಾರಿ ಡಾ. ಎಸ್.ವಿ. ಸುಷ್ಮಾ ರಂಗ ಭೂಮಿಯ ಹೆಸರಾಂತ ನಿರ್ದೇಶಕಿ, ಕೊರಿಯೋಗ್ರಫಿ ವಿಜಯನಗರ ಬಿಂಬದ ರಂಗ ಶಿಕ್ಷಣ ಕೇಂದ್ರದ ಹಿರಿಯ ವಿಭಾಗದ ಪ್ರಿನ್ಸಿಪಾಲ್. ಪ್ರಸ್ತುತ ಪೆಸಿಟ್ ಯೂನಿವರ್ಸಿಟಿಯಲ್ಲಿ ಪ್ರದರ್ಶನ ಕಲೆಗಳ ವಿಭಾಗದಲ್ಲಿ ಮುಖ್ಯಸ್ಥರು ಹಾಗೂ ಪ್ರೊಫೆಸರ್ ಆಗಿದ್ದಾರೆ.
‘ಥೇಮಾ’ ತಂಡದಿಂದ ಕನ್ನಡ ರಂಗಭೂಮಿಯಲ್ಲಿ ಮೊದಲ ಬಾರಿ ಇಮ್ಮೆರ್ಸಿವ್ ಥಿಯೇಟರ್ ಐ.ಸಿ. 47 ಯಶಸ್ವಿ ಪ್ರಯೋಗಗಳು ಆಯಿತು. ಡಾ. ಎಸ್.ವಿ. ಸುಷ್ಮಾರವರು ಒಂದು ದಿನದಲ್ಲಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ 240, 4 ನಿಮಿಷದ ಬೀದಿ ನಾಟಕಗಳು ಹಾಗೂ ಅರ್ಧ ಘಂಟೆಯ ಬೀದಿನಾಟಕವನ್ನು ನಿರ್ದೇಶಿಸಿದ್ದಾರೆ. ‘ಥೇಮಾ’ ತಂಡದ ಹತ್ತು ವರ್ಷಕ್ಕೆ ಶುಭಾಶಯಗಳು.