ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ಟರು ಬರೆದ ಪೌರಾಣಿಕ ಕಾದಂಬರಿ “ಸುಜ್ಞಾನಿ ಸಹದೇವ” ಇದರ ಲೋಕರ್ಪಣಾ ಸಮಾರಂಭವು ದಿನಾಂಕ 03 ನವಂಬರ್ 2024ರ ಭಾನುವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.
ಪುಸ್ತಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾದಂಬರಿ ಕೃತಿಕಾರ ಡಾ. ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಭವ್ಯ ಜಿ. ಜಿ. , ಮಕ್ಕಳಾದ ಅಭಿಗಮ್ಯ ರಾಮ್, ಆಶ್ಮನ್ ಕೃಷ್ಣ, ಹಿರಿಯ ವಕೀಲ ಹಾಗೂ ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ. ಕೆ. ಶೈಲಾ ಉಪಸ್ಥಿತರಿದ್ದರು.
ಮಹಾಭಾರತದಲ್ಲಿ ಎಲೆಮರೆಯ ಕಾಯಿಯಂತಿರುವ ದಿವ್ಯಜ್ಞಾನಿ ಸಹದೇವನ ಕುರಿತ ಸಮಗ್ರ ಮಾಹಿತಿಯುಳ್ಳ ಈ ಕಾದಂಬರಿಗೆ ಹಿರಿಯ ಯಕ್ಷಗಾನ ತಾಳಮದ್ದಳೆ ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮುನ್ನುಡಿ ಬರೆದಿದ್ದು, ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಶ್ರೀ ಪ. ರಾಮಕೃಷ್ಣ ಶಾಸ್ತ್ರಿ ಶುಭನುಡಿಗಳನ್ನು ಬರೆದಿರುತ್ತಾರೆ.
ಪ್ರಸ್ತುತ ಕಾದಂಬರಿಯನ್ನು ಮೈಸೂರಿನ ಅಂಬಾರಿ ಪ್ರಕಾಶನದವರು ಪ್ರಕಟಿಸಿದ್ದು ಪ್ರತಿಗಳಿಗಾಗಿ ಲೇಖಕರನ್ನು (9448951856) ಸಂಪರ್ಕಿಸಬಹುದಾಗಿದೆ.
Subscribe to Updates
Get the latest creative news from FooBar about art, design and business.
ಲೋಕರ್ಪಣೆಗೊಂಡ ಡಾ. ಸುಬ್ರಹ್ಮಣ್ಯ ಭಟ್ಟರ ನಾಲ್ಕನೇ ಕಾದಂಬರಿ ‘ಸುಜ್ಞಾನಿ ಸಹದೇವ’
No Comments1 Min Read
Previous Articleನೃತ್ಯ ವಿಮರ್ಶೆ | ಮನ ತಣಿಸಿದ ರಂಜನೀಯ ಕುಚಿಪುಡಿ ನಾಟ್ಯ ಸರಣಿ
Next Article ವಿಶ್ವಮಂಗಳದಲ್ಲಿ ಕ.ಸಾ.ಪ.ದಿಂದ ರಾಜ್ಯೋತ್ಸವ
Related Posts
Comments are closed.