ಮಂಗಳೂರು : ಮಂಗಳೂರಿನ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ನೃತ್ಯಾಂಗನ್ ಪ್ರಸ್ತುತ ಪಡಿಸುವ ‘ಮಂಥನ 2024’ ಭರತನಾಟ್ಯ ಉತ್ಸವದ ದಶಮ ಆವೃತ್ತಿವನ್ನು ದಿನಾಂಕ 22 ನವೆಂಬರ್ 2024ರಂದು ಸಂಜೆ 5-45 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಚೆನ್ನೈ ಮೂಲದ ಭರತನಾಟ್ಯ ಕಲಾವಿದೆ ವಿದುಷಿ ಲಾವಣ್ಯ ಅನಂತ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಹೆಸರಾಂತ ಭರತನಾಟ್ಯ ಕಲಾವಿದರಾದ ಕೊಡಗಿನ ವಿದುಷಿ ಶಿಲ್ಪಾ ನಂಜಪ್ಪ, ಚೆನ್ನೈಯ ವಿದುಷಿ ದಿವ್ಯಾ ನಾಯರ್, ಬೆಂಗಳೂರಿನ ವಿದುಷಿ ಇಂದು ವೇಣು, ಪುತ್ತೂರಿನ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಮಂಗಳೂರಿನ ವಿದುಷಿ ರಾಧಿಕಾ ಶೆಟ್ಟಿ ಇವರುಗಳು ಏಕ ವ್ಯಕ್ತಿ ಪ್ರದರ್ಶನ ನೀಡಲಿದ್ದು, ಇವರಿಗೆ ನಟುವಾಂಗದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ನಂದಕುಮಾರ್ ಉಣ್ಣಿಕೃಷ್ಣನ್, ಮೃದಂಗದಲ್ಲಿ ಶ್ರೀ ಕಾರ್ತಿಕ್ ವಿಧಾತ್ರಿ ಹಾಗೂ ಕೊಳಲಿನಲ್ಲಿ ಶ್ರೀ ನಿತೀಶ್ ಅಮ್ಮಣ್ಣಯಾ ಇವರುಗಳು ಸಹಕರಿಸಲಿದ್ದಾರೆ.