ಮಂಗಳೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಳಾಯಿ ಇದರ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ ಇದರ ಕಲಾವಿದರಿಂದ ‘ರಾಜಾ ದಂಡಕ’ ಪ್ರಸಂಗದ ಯಕ್ಷಗಾನ ಬಯಲಾಟವು ಪ್ರಾಧ್ಯಾಪಕರು ಮತ್ತು ಯಕ್ಷಗಾನ ರಂಗ ನಿರ್ದೇಶಕರಾದ ಡಾ. ದಿನಕರ ಎಸ್. ಪಚ್ಚನಾಡಿ ಇವರ ನಿರ್ದೇಶನದಲ್ಲಿ ದಿನಾಂಕ 20 ನವೆಂಬರ್ 2024ನೇ ಬುಧವಾರ ದೇವಳದ ರಂಗಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಬೋಂದೇಲ್ ಸತೀಶ್ ಶೆಟ್ಟಿ, ಹರಿಪ್ರಸಾದ್ ಕಾರಂತ ಸರಪಾಡಿ, ಜಯರಾಮ ಆಚಾರ್ಯ ಚೇಳ್ಯಾರು, ಸೂರಜ್ ಆಚಾರ್ಯ ಮುಲ್ಕಿ, ಬಾಯಾರು ಎಸ್. ಎನ್. ಭಟ್, ಸುರೇಶ್ ಕಾಮತ್ ಹಾಗೂ ಮಾಧವ ಮಯ್ಯ ತಡಂಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಇಕ್ಷಾಕುಪಾತ್ರದಲ್ಲಿ ಶ್ರೀನಿಧಿ ಹೊಸಬೆಟ್ಟು, ಪುರೋಹಿತನಾಗಿ ನಂದಪ್ರಸಾದ ಕುಳಾಯಿ ಹಾಗೂ ಮಾ. ವಿದ್ವತ್ ಹೆಬ್ಬಾರ್ ಕುಳಾಯಿ, ಬಾಲ ದಂಡಕನಾಗಿ ಮಾ. ಶಂಕರನಾರಾಯಣ ಕಾರಂತ ಕುಳಾಯಿ, ರಾಜಾ ದಂಡಕನಾಗಿ ವಿನೋದ್ ರಾವ್ ಕುತ್ತೆತ್ತೂರು, ದೂತನಾಗಿ ದಿವಾಕರ ಕುಳಾಯಿ, ಮಂತ್ರಿಯಾಗಿ ಶ್ರೀನಿಧಿ ಹೊಸಬೆಟ್ಟು ಶುಕ್ರಾಚಾರ್ಯರಾಗಿ ವೇದವ್ಯಾಸ ರಾವ್ ಕುತ್ತೆತ್ತೂರು, ಅರಜೆಯಾಗಿ ಪ್ರಜ್ವಲ್ ಐತಾಳ್ ಕುಳಾಯಿ, ದೇವೇಂದ್ರನಾಗಿ ಗುರುಪ್ರಸಾದ್ ಕಾರಂತ ಸರಪಾಡಿ, ಯಮನಾಗಿ ವಾಸುದೇವ ಆಚಾರ್ ಕಟ್ಲ ಸುರತ್ಕಲ್, ಕುಬೇರನಾಗಿ ರಂಜಿತ್ ಕುಳಾಯಿ, ವಿಲೋಚನ ಪಾತ್ರದಲ್ಲಿ ಮಾ. ಹೃಷಿಕೇಶ್ ಹೆಬ್ಬಾರ್ ಕುಳಾಯಿ, ಸುಲೋಚನ ಪಾತ್ರದಲ್ಲಿ ಮಾ. ಆದೈತ್ ಮಯ್ಯ ಕುಳಾಯಿ, ಸುಭಾಸನಾಗಿ ರಾಘವೇಂದ್ರ ಕಾರಂತ ಕುಳಾಯಿ, ಭದ್ರಕೇತನಾಗಿ ನಂದಪ್ರಸಾದ ಕುಳಾಯಿ, ರುದ್ರಕೇತನಾಗಿ ಕಾರುಣ್ಯನಿಧಿ ಇಡ್ಯಾ, ವರುಣನಾಗಿ ವಿಶ್ಲೇಶ್ ಬಿ. ಎಸ್. ಕುಳಾಯಿ ಹಾಗೂ ಮಾರುತನಾಗಿ ಸಚಿನ್ ಪೂಜಾರಿ ಕುಳಾಯಿ ಪಾತ್ರ ನಿರ್ವಹಿಸಿದರು.