ಮಂಗಳೂರು : ವಿಶ್ವಂ ಸ್ಕೂಲ್ ಆಫ್ ಆರ್ಟ್ ಪ್ರಸ್ತುತ ಪಡಿಸುವ ‘ಮಣ್ಣಿನಾಟ’ ಮಕ್ಕಳಿಗಾಗಿ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ 08 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಯಿಂದ 4-30 ಗಂಟೆಯವರೆಗೆ ಮಂಗಳೂರಿನ ಟೆಂಪುಲ್ ಸ್ಕ್ವೇರ್, ಪ್ರೇಮ ಪ್ಲಾಜಾ ಕಟ್ಟಡದಲ್ಲಿರುವ ವಿಶ್ವಂ ಸ್ಕೂಲ್ ಆಫ್ ಆರ್ಟ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕ್ಲೇ ಮೊಡೆಲ್ಲಿಂಗ್ ಕಾರ್ಯಾಗಾರದಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು ಭಾಗವಹಿಸಬಹುದು. ನೋಂದಣಿ ಶುಲ್ಕ ರೂ.200/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845663331 ಸಂಖ್ಯೆಯನ್ನು ಸಂಪರ್ಕಿಸಿರಿ.