ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಇದರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ 01 ಡಿಸೆಂಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯರನ್ನು ರಂಜಿಸುವ ಸಲುವಾಗಿ ಹಾಗೂ ಅವರಲ್ಲಿರುವ ಸಾಂಸ್ಕೃತಿಕ ಆಸಕ್ತಿಯ ಹಾಡು, ನೃತ್ಯ, ರಾಧೆ-ಕೃಷ್ಣ ವೇಷ, ಮೋಜಿನ ಆಟಗಳು, ಹಾಸ್ಯ, ಛದ್ಮವೇಷ ಹಾಗೂ ಮತ್ತಿರರ ಸ್ಪರ್ಧಾ ಚಟುವಟಿಕೆಗಳು ಪ್ರಸ್ತುತಗೊಳ್ಳಲಿವೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು.
ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವ್ವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ ಆಸರೆ ನೀಡುವ ಜವಾಬ್ದಾರಿ ಕಿರಿಯರಾದ ನಮ್ಮೆಲ್ಲರದ್ದು. ಅವರು ಹಾಕಿಕೊಟ್ಟ ಬದುಕಿನ ಅಡಿಪಾಯದಲ್ಲಿ ನಾವಿಂದು ಗೂಡು ಕಟ್ಟಿಕೊಂಡಿದ್ದೇವೆ. ನಮ್ಮ ಬಾಲ್ಯದಲ್ಲಿ ಅವರು ತೋರಿದ ಪ್ರೀತಿ ವಾತ್ಸಲ್ಯ ಮಮಕಾರವನ್ನು ನಾವಿಂದು ಅವರಿಗೆ ಮರಳಿಸಬೇಕಾಗಿದೆ. ಎಲ್ಲಾ ಗೌರವಾನ್ವಿತ ಹಿರಿಯ ನಾಗರಿಕರನ್ನು ದಿನವಿಡೀ ರಂಜಿಸಿ ಅವರ ಮನ ಸಂತೋಷ ಪಡಿಸುವ, ತನ್ಮೂಲಕ ಹಿರಿಯರ ಸೇವೆ ಗಯ್ಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.