ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 45ನೇಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 04 ಡಿಸೆಂಬರ್ 2024ರಂದು ರಂಗಭೂಮಿ (ರಿ.) ಉಡುಪಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ರಂಗಭೂಮಿ (ರಿ.) ಉಡುಪಿ ಇವರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಕಲ್ಪವೃಕ್ಷ ಟ್ರಸ್ಟ್ ತಂಡದವರು ಭೀಷ್ಮ ರಾಮಯ್ಯ ರಚಿಸಿರುವ ಭಾಷ್ ರಾಘವೇಂದ್ರ ಇವರ ನಿರ್ದೇಶನದಲ್ಲಿ ‘ಮಿ. ರಾವ್ & ಅಸೋಸಿಯೇಟ’ ಸಾಮಾಜಿಕ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 05 ಡಿಸೆಂಬರ್ 2024ರಂದು ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಭೆ (ರಿ.) ಇವರು ಆನಂದ ಝಂಜರವಾಡ ರಚಿಸಿರುವ ಪಿ.ಎ. ಕುಲಕರ್ಣಿ ನಿರ್ದೇಶನದಲ್ಲಿ ‘ಹಕ್ಕಿಯ ಹೆಗಲೇರಿ’ ಐತಿಹಾಸಿಕ ನಾಟಕ, ದಿನಾಂಕ 06 ಡಿಸೆಂಬರ್ 2024ರಂದು ಹಾಸನದ ಕಲಾಸಿರಿ ನಾಟಕ ಶಾಲೆಯ ಕಲಾವಿದರು ಜಯಶಂಕರ್ ಬೆಳಗುಂಬ ಇವರ ನಿರ್ದೇಶನದಲ್ಲಿ ‘ಮಾರ್ಪಿನ್’ ಸಾಮಾಜಿಕ ನಾಟಕ, ದಿನಾಂಕ 07 ಡಿಸೆಂಬರ್ 2024ರಂದು ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಶನ್ ತಂಡದವರು ಚಿದಾನಂದ ಎಸ್. ರಚನೆ ಮತ್ತು ನಿರ್ದೇಶನದಲ್ಲಿ ‘ಅನವರತ’ ಸಾಮಾಜಿಕ ನಾಟಕ, ದಿನಾಂಕ 08 ಡಿಸೆಂಬರ್ 2024ರಂದು ಬೆಂಗಳೂರಿನ ನೆನಪು ಕಲ್ಚರಲ್ & ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ತಂಡದವರು ರಾಮನಾಥ್ ಎಸ್. ರಚನೆಯ ಪುನೀತ್ ಎ.ಎಸ್. ನಿರ್ದೇಶನದಲ್ಲಿ ‘ಅಶ್ವ ಪರ್ವ’ ಪೌರಾಣಿಕ ನಾಟಕ, ದಿನಾಂಕ 09 ಡಿಸೆಂಬರ್ 2024ರಂದು ಮೈಸೂರು ಮೈಮ್ ಟೀಮ್ ಕಲಾವಿದರು ಬಿ.ಆರ್. ಲಕ್ಷ್ಮಣ ರಾವ್ ರಚಿಸಿರುವ ವಿನಾಯಕ ಭಟ್ ಹಾಸಣಗಿ ಇವರ ನಿರ್ದೇಶನದಲ್ಲಿ ‘ನನಗ್ಯಾಕೋ ಡೌಟು’ ಸಾಮಾಜಿಕ ನಾಟಕ, ದಿನಾಂಕ 10 ಡಿಸೆಂಬರ್ 2024ರಂದು ಬೆಂಗಳೂರಿನ ಯುವಶ್ರೀ ತಂಡದವರು ಶರತ್ ಪರ್ವತವಾಣಿ ಇವರು ರಚನೆ ಮತ್ತು ನಿರ್ದೇಶನದಲ್ಲಿ ‘ಒಂದು ವಿಲಯ ಕಥೆ’ ಸಾಮಾಜಿಕ ನಾಟಕ, ದಿನಾಂಕ 11 ಡಿಸೆಂಬರ್ 2024ರಂದು ಬಳ್ಳಾರಿ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ (ರಿ.) ತಂಡದವರು ಡಾ. ಎಂ. ಬೈರೇಗೌಡ ರಚನೆ ಮತ್ತು ನವೀನ ಭೂಮಿ ಇವರ ನಿರ್ದೇಶನದಲ್ಲಿ ‘ಸರಸತಿಯಾಗಲೊಲ್ಲೆ’ ಸಾಮಾಜಿಕ ನಾಟಕ, ದಿನಾಂಕ 12 ಡಿಸೆಂಬರ್ 2024ರಂದು ಶಿವಮೊಗ್ಗ ಅಭಿನಯ ತಂಡದವರು ಎಸ್.ಸಿ. ಗೌರೀಶಂಕರ ರಚನೆ ಮತ್ತು ನಿರ್ದೇಶನದಲ್ಲಿ ‘ಪೀಠಾರೋಹಣ’ ಐತಿಹಾಸಿಕ ನಾಟಕ, ದಿನಾಂಕ 13 ಡಿಸೆಂಬರ್ 2024ರಂದು ಉಡುಪಿ ಬ್ರಹ್ಮಾವರ ಹಾರಾಡಿಯ ಭೂಮಿಕಾ (ರಿ.) ತಂಡದವರು ಶಶಿರಾಜ್ ರಾವ್ ಕಾವೂರು ರಚನೆಯ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ‘ಬರ್ಬರೀಕ’ ಪೌರಾಣಿಕ ನಾಟಕ, ದಿನಾಂಕ 14 ಡಿಸೆಂಬರ್ 2024ರಂದು ಬೆಂಗಳೂರಿನ ನಮ್ದೆ ನಟನೆ ತಂಡದವರು ರಾಜೇಂದ್ರ ಕಾರಂತ ರಚನೆ ಮತ್ತು ನಿರ್ದೇಶನದಲ್ಲಿ ‘ನಾಯಿ ಕಳೆದಿದೆ’ ಸಾಮಾಜಿಕ ನಾಟಕ ಮತ್ತು ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ರಂಗರಥ ಟ್ರಸ್ಟ್ (ರಿ.) ತಂಡದವರು ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ‘ಧರ್ಮನಟಿ’ ಐತಿಹಾಸಿಕ ನಾಟಕ ಪ್ರದರ್ಶನ ನೀಡಲಿದ್ದಾರೆ.