ಮಂಗಳೂರು : ಸಾಧನ ಬಳಗ ಮಂಗಳೂರು ವತಿಯಿಂದ ‘ಸ್ನೇಹ ಮಿಲನ-25’ ಕಾರ್ಯಕ್ರಮ ವಿ.ಟಿ.ರಸ್ತೆಯ ಕೃಷ್ಣ ಮಂದಿರದಲ್ಲಿ ದಿನಾಂಕ 17 ನವೆಂಬರ್2024 ರಂದು ನಡೆಯಿತು.
ಡಾ. ಕುಂಬಳೆ ಅನಂತ ಪ್ರಭು ಹಾಗೂ ಉದ್ಯಮಿ ಮಹೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ಮಹೇಶ್ ಕಾಮತ್ “ಸಂಗೀತ ನೃತ್ಯ ಹಾಗೂ ನಾಟಕಗಳನ್ನು ಕಲಿತಾಗ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಧೈರ್ಯ ಬರುತ್ತದೆ.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕರಾದ ಚಿ. ಸಮರ್ಥ ಶೆಣೈ ಹಾಗೂ ಡಾ. ಅನಂತ ಪ್ರಭು ಇವರನ್ನು ಸಮ್ಮಾನಿಸಲಾಯಿತು. ಸಭಾ ಕರ್ಯಕ್ರಮದ ಬಳಿಕ ವಿದುಷಿ ವೃಂದಾ ನಾಯಕ್ ನೇತೃತ್ವದಲ್ಲಿ ಸಮೂಹ ನೃತ್ಯ, ಗಾಯನ ಹಾಗೂ ಯು.ಪ್ರಕಾಶ ಶೆಣೈ ಮತ್ತು ಪುಷ್ಪಲತಾ ಭಟ್ ಇವರ ನಿರ್ದೇಶನದಲ್ಲಿ ಕಲಾ ಸಾಧನ ಮಕ್ಕಳಿಂದ ‘ಪತ್ತೋಳಿ ರೂಕ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.
ಸಬಿತಾ ಕಾಮತ್ ಸ್ವಾಗತಿಸಿ, ಲಕ್ಷ್ಮೀ ಭಂಡಾರಿ, ವಿದ್ಯಾ ಪ್ರಭು, ಭಾಗ್ಯ ಭಟ್ ನಿರೂಪಿಸಿದರು. ಡಾ। ಕೃಷ್ಣ ಪ್ರಭು, ಮಂಜುಳಾ ಕಾಮತ್, ವಿನುತಾ ಪೈ, ಸುರೇಖಾ ಭಟ್, ಸತೀಶ್ ಕುಮಾರ್ ಭಟ್ ಸಹಕರಿಸಿ, ನರಸಿಂಹ ಭಂಡಾರ್ಕರ್ ವಂದಿಸಿದರು.