ಹೊಸದಿಲ್ಲಿ: ಕನ್ನಡದ ಭಾಷಾ ವಿಜ್ಞಾನಿ ಹಾಗೂ ಹಿರಿಯ ವಿಮರ್ಶಕರಾದ ಪ್ರೊ. ಕೆ. ವಿ. ನಾರಾಯಣ್ ಇವರು 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ. ವಿ. ಎನ್. ಇವರ ‘ನುಡಿಗಳ ಅಳಿವು- ಬೇರೆ ದಿಕ್ಕಿನ ನೋಟ’ ಎಂಬ ಬಹುಜ್ಞಾನ ಶಾಸ್ತ್ರೀಯ ವಿಮರ್ಶಾ ಕೃತಿ ಈ ಹಿರಿಮೆಗೆ ಪಾತ್ರವಾಗಿದೆ. ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 08 ಮಾರ್ಚ್ 2025ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ
ಕೆ. ವಿ. ಎನ್. ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಹಾಗೂ ಅನುವಾದಕ ಓ. ಎಲ್. ನಾಗಭೂಷಣ ಸ್ವಾಮಿ, ಬರಹಗಾರರಾದ ಡಾ. ಹಳೆಮನಿ ರಾಜಶೇಖರ್ ಹಾಗೂ ಡಾ. ಸರಜೂ ಕಾಟ್ಕರ್ ಇದ್ದರು.