ಬೆಂಗಳೂರು : ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ, ವಿಶ್ವ ಮಾನವ ದಿನಾಚರಣೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರಿನ ಕವಿ ಮತ್ತು ಚಿಂತಕರಾದ ಯೂಸಫ್. ಹೆಚ್ .ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ದೂರದರ್ಶನದ ವಿಶ್ರಾಂತ ಅಧಿಕಾರಿಗಳಾದ ರಾ. ಸು. ವೆಂಕಟೇಶ ಇವರು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಅತಿಥಿಗಳಾಗಿ ಡಾ. ಸುರೇಶ್ ಬಾಬು ಬಿ. ಎನ್., ಡಾ. ಎಂ. ಎಂ. ಭಾಷಾ ನಂದಿ, ಸಿನಾನ್ ಇಂದಬೆಟ್ಟು, ಡಾ. ಕೆ. ಜಿ. ಗೋಪಾಲಕೃಷ್ಣ, ಡಾ. ಕಾವ್ಯ ಎಸ್. ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಶಾಂತ ಜಯಾನಂದ್ ಹಾಗೂ ಯೂಸುಫ್ ರೆಂಜಲಾಡಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಹಿತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕ ಆಮಿರ್ ಅಶ್ಅರೀ ಬನ್ನೂರು ತಿಳಿಸಿದ್ದಾರೆ.