ಕಾಸರಗೋಡು: ಶ್ರೀಮಾನ್ ಕೃಷ್ಣಮೂರ್ತಿ ಕುಲಕರ್ಣಿ ಹುಬ್ಬಳ್ಳಿ ಸಾರಥ್ಯದ ‘ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್’ ಇದೀಗ ಕೇರಳ ರಾಜ್ಯದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸುವ ಸದುದ್ದೇಶದಿಂದ ಕಾರ್ಯಪ್ರವೃತ್ತವಾಗಿದೆ. ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಚುಟುಕು ಕವಿತೆಗಳ ಜನಪ್ರಿಯ ಕವಿ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾದ ವೆಂಕಟ್ ಭಟ್ ಎಡನೀರು ಇವರನ್ನು ಕಾಸರಗೋಡು ಜಿಲ್ಲಾ ವ್ಯಾಪ್ತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಅನೇಕ ಚುಟುಕು ಕೃತಿಗಳನ್ನು ರಚಿಸಿದ್ದಾರೆ. ನೂರಾರು ಕವಿಗೋಷ್ಠಿ ಹಾಗೂ ಕವಿತೆ ರಚನಾ ಕಾರ್ಯಾಗಾರಗಳನ್ನು ಸಂಘಟಿಸಿದ್ದಾರೆ. ಇವರ ಪ್ರಕಟಿತ ಚುಟುಕು ಕೃತಿಗಳಾದ ‘ಖರ್ಜೂರ’, ‘ನೂರೊಂದು ಕವಿತೆಗಳು’, ‘ತಿಳಿಸಾರು’, ‘ಪೆಟ್ಟಿಗೆ ಭೂತ’ ಹಾಗೂ ‘302 ಎಳ್ಳುಂಡೆ’ ಪ್ರಸಿದ್ಧಿ ಪಡೆದಿವೆ.
Subscribe to Updates
Get the latest creative news from FooBar about art, design and business.
Next Article ಹಿರಿಯ ಸಾಹಿತಿ ನಾ’ಡಿಸೋಜ ನಿಧನ