ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 11 ಜನವರಿ 2025ರಂದು ‘ತುಳು ವಿಚಾರಗೋಷ್ಠಿ’ಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಇವರು ಮಾತನಾಡಿ “ತುಳುವಿನ ಬಗ್ಗೆ ಹಿಂಜರಿಕೆಯ ಕಾಲವೊಂದಿತ್ತು. ಇಂದು ತುಳುವಿನ ಬಗ್ಗೆ ಗೌರವ ಪ್ರಾಪ್ತವಾದ ಕಾಲ. ಅಪೂರ್ವ ದಾಖಲೀಕರಣಕ್ಕೆ ಸೂಕ್ಷ್ಮ ಅಧ್ಯಯನಕ್ಕೆ ವಿಪುಲ ಅವಕಾಶವಿದೆ. ತುಳುವಿನಲ್ಲಿ ಬಹು ಭಾಷಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಕುತೂಹಲ ಮತ್ತು ಗೌರವದಿಂದ ನೋಡುವ ಮನೋಭಾವ ಲೇಖಕನಿಗೆ ಅಗತ್ಯ” ಎಂದು ನುಡಿದರು.
ಸಂಯೋಜಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಹೃಷಿಕೇಶ್, ತೇಜಸ್, ಅರ್ಚನಾ, ಸಂಚನಾ, ಶ್ರೇಯಸ್, ಪ್ರಿಥ್ವಿಜಾ, ಅನೂಷ ಕ್ರಮವಾಗಿ ನಾಗಬನ, ಅಜಿಲ ಸೀಮೆ, ಕೊರಗ ತನಿಯ, ತುಳುವರ ಆರಾಧನೆ, ಕೋಟಿ, ಚೆನ್ನಯ ಅವಳಿ ಆರಾಧನೆ, ಆಚರಣಾ ಪದ್ದತಿಯ ಬಗ್ಗೆ ವಿಚಾರ ಮಂಡಿಸಿದರು. ಪ್ರಾಂಶುಪಾಲ ಡಾ. ಕುರಿಯನ್, ಉಪನ್ಯಾಸಕರಾದ ಡಾ. ಜ್ಯೋತಿ ರೈ, ಹರೀಶ್ ಟಿ.ಜಿ ಉಪಸ್ಥಿತರಿಸ್ದರು. ಶ್ರೇಯಾಂಕ ಸ್ವಾಗತಿಸಿ, ಕೌಶಿಕ್ ವಂದಿಸಿ, ಪ್ರಣಮ್ಯ ನಿರೂಪಿಸಿದರು.