ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 21 ಜನವರಿ 2025ರಂದು ‘ಶ್ರೀ ಕೃಷ್ಣ ಸಂಧಾನ’ ಎಂಬ ಅಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ನಿತೀಶ್ ಎಂಕಣ್ಣಮೂಲೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ವಿದುರ (ಮಾಂಬಾಡಿ ವೇಣುಗೋಪಾಲ ಭಟ್), ದ್ರೌಪದಿ (ಅಚ್ಯುತ ಪಾಂಗಣ್ಣಾಯ), ಕೌರವ (ಶ್ರುತಿ ವಿಸ್ಮಿತ್ ಬಲ್ನಾಡು) ಸಹಕರಿಸಿದರು. ಇಂಜಿನಿಯರ್ ಶಂಕರ್ ಭಟ್ ಕಾರ್ಯಕ್ರಮ ಪ್ರಾಯೋಜಿಸಿದರು.