ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದ್ರೆ ಇದರ ವಿದ್ಯಾರ್ಥಿಗಳು ನಟಿಸಿರುವ ಹಿರಿಯ ಸಾಹಿತಿ ವೈದೇಹಿ ಇವರ ರಚನೆಯ ‘ನಾಯಿಮರಿ’ ನಾಟಕವು ದಿನಾಂಕ 30 ಜನವರಿ 2025 ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಹವಾನಿಯಂತ್ರಿತ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ರಂಗ ಮಾಂತ್ರಿಕ ಜೀವನ ರಾಂ ಸುಳ್ಯ ಇವರ ನಿರ್ದೇಶನದ ಶ್ರೇಷ್ಠ ನಾಟಕಗಳಲ್ಲಿ ‘ನಾಯಿಮರಿ’ ನಾಟಕವು ಒಂದು. ಅದ್ಭುತ ಪರಿಕಲ್ಪನೆಯ ಈ ನಾಟಕ ಹಲವು ಪ್ರದರ್ಶನಗಳನ್ನು ಕಂಡಿರುತ್ತದೆ. ಚುರುಕು ನಟನೆ, ರಂಗ ಚಲನೆಗಳು, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ, ರಂಗ ಪರಿಕರಗಳು ಹಾಗೂ ಬೆಳಕು ಎಲ್ಲವೂ ಈ ನಾಟಕದ ಯಶಸ್ಸಿಗೆ ಕಾರಣ. ಪ್ರತಿಯೊಬ್ಬ ಮಕ್ಕಳು, ಹಿರಿಯರು, ಕುಟುಂಬ ಸಮೇತರಾಗಿ ನೋಡಲೇಬೇಕಾದ ನಾಟಕ. ‘ನಾಯಿಮರಿ’ ನಾಟಕದಲ್ಲಿ ಬರುವ ನಾಯಿಮರಿ ಪಾತ್ರ, ಮಂಗಾಣಿ ಪಾತ್ರ ಹಾಗೂ ಎಲ್ಲಾ ಪಾತ್ರಗಳು ಅದ್ಭುತ.