ಬಂಟ್ವಾಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಪರಾರಿಗುತ್ತು ದಿ. ಬಾಲಕೃಷ್ಣ ಶೆಟ್ಟಿ ಯವರ ತೃತೀಯ ವರ್ಷದ ಸವಿನೆನಪಿಗಾಗಿ ಬಂಟ್ವಾಳ ಪರಾರಿಗುತ್ತು ಮನೆಯಲ್ಲಿ ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಿರುವರು.
ಇದೇ ಸಂದರ್ಭದಲ್ಲಿ ಸಂಪಾಜೆ ದಿ. ಶೀನಪ್ಪ ರೈ, ಕುಂಬಳೆ ದಿ. ಶ್ರೀಧರ ರಾವ್ ಮತ್ತು ಬಂಟವಾಳ ದಿ. ಜಯರಾಮ ಆಚಾರ್ಯ ಇವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಸಂಪಾಜೆ ಶ್ರೀಮತಿ ಗಿರಿಜಾವತಿ ಶೀನಪ್ಪ ರೈ, ಕುಂಬಳೆ ಶ್ರೀಮತಿ ಸುಲೋಚನಾ ಶ್ರೀಧರ ರಾವ್ ಮತ್ತು ಬಂಟವಾಳ ಶ್ರೀಮತಿ ಶ್ಯಾಮಲಾ ಜಯರಾಮ ಆಚಾರ್ಯ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.