ಬೆಳ್ತಂಗಡಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಐದನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ದಿನಾಂಕ 07 ಫೆಬ್ರವರಿ 2025ನೇ ಶುಕ್ರವಾರ ‘ಶ್ಯಮಂತಕ ಮಣಿ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಮತ್ತು ಪದ್ಮನಾಭ ಕುಲಾಲ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸ್ವರ್ಣಲತಾ ಬಾರ್ಯ ಮತ್ತಿತರರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.