ಬೆಂಗಳೂರು : ‘ರಂಗ ಚಕ್ರ’ ಬೆಂಗಳೂರು ಆಯೋಜಿಸುವ ಮೂರು ದಿನಗಳ ರಂಗ ನಟನಾ ಕಾರ್ಯಾಗಾರವು ದಿನಾಂಕ 14 ಫೆಬ್ರವರಿ 2025ರಿಂದ 16 ಫೆಬ್ರವರಿ 2025ರವರೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ರಂಗ ತಾಲೀಮು ಕೊಠಡಿಯಲ್ಲಿ ನಡೆಯಲಿದೆ.
ರಂಗಚಕ್ರ ತಂಡವು ಸುಮಾರು 15 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಇದುವರೆಗೆ 100ಕ್ಕೂ ಹೆಚ್ಚು ರಂಗತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ನೀನಾಸಂ ಹಾಗೂ ರಂಗಾಯಣದಂತಹ ಪ್ರತಿಷ್ಠಿತ ರಂಗ ಸಂಸ್ಥೆಗಳಿಂದ ನುರಿತ ನಿರ್ದೇಶಕರನ್ನು ಕರೆಸಿ. ಹೊಸ ನಾಟಕದ ಪ್ರಯೋಗಗಳನ್ನು ಪ್ರದರ್ಶಿಸುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಉಚಿತ ಅಭಿನಯ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಈ ರಂಗ ಕಾರ್ಯಾಗಾರವನ್ನು ಹಿರಿಯ ನಿರ್ದೇಶಕ ಹಾಗೂ ನಟರಾದ ಟಿ. ಎಸ್. ನಾಗಭರಣ ಉದ್ಘಾಟಲಿಸಿದ್ದಾರೆ.