ಕಾರ್ಕಳ : ಶಾಸ್ತ್ರೀಯ ಸಂಗೀತ ಸಭಾ (ರಿ.) ಇದರ ವತಿಯಿಂದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಂಗೀತಗುರು ವಿದ್ವಾನ್ ಬಿ. ಯೋಗೀಶ್ ಬಾಳಿಗಾ ಸ್ಮರಣಾರ್ಥ ‘ಕಲಾಸಾಧನ ಯುವ ಸಂಗೀತೋತ್ಸವ’ ಮತ್ತು 33ನೇ ‘ಕಾರ್ಕಳ ಸಂಗೀತ ಮಹೋತ್ಸವ 2025’ವನ್ನು ದಿನಾಂಕ 07ರಿಂದ 09 ಮಾರ್ಚ್ 2025ರವರೆಗೆ ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 07 ಮಾರ್ಚ್ 2025ರಂದು ಸಂಜೆ 4-00 ಗಂಟೆಗೆ ಕಾರ್ಕಳದ ಮಾಸ್ಟರ್ ಶ್ರೀಕರ ನಾರಾಯಣ ಉಪಾಧ್ಯಾಯ ಇವರಿಂದ ಕೊಳಲು ವಾದನ, 5-00 ಗಂಟೆಗೆ ಬೆಂಗಳೂರಿನ ಕುಮಾರಿ ಪ್ರಜ್ಞಾ ಅಡಿಗ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಗಾಯನ’, ಗಂಟೆ 6-30ಕ್ಕೆ ಚೆನ್ನೈಯ ವಿದ್ವಾನ್ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ.
ದಿನಾಂಕ 08 ಮಾರ್ಚ್ 2025ರಂದು ಸಂಜೆ 3-30 ಗಂಟೆಗೆ ಕಾರ್ಕಳ ಅನಂತಶಯನದ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ತಬಲಾ ವೃಂದ ವಾದನ ಮತ್ತು ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ವೃಂದ ಗಾಯನ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ಮುಂಬೈಯ ಓಂ ಬೋಂಗಾನೆ ಇವರಿಂದ ‘ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ’ ಹಾಗೂ 6-30 ಗಂಟೆಗೆ ಕರ್ನಾಟಕ ಹಿಂದೂಸ್ಥಾನಿ ವಾದ್ಯ ಜುಗಲ್‌ಬಂದಿ ನಡೆಯಲಿದ್ದು, ಚೆನ್ನೈಯ ವಿದ್ವಾನ್ ವಿಜಯ್ ಗೋಪಾಲ್ ಇವರು ಕೊಳಲು ಮತ್ತು ಮಂಗಳೂರಿನ ಅಂಕುಶ್ ನಾಯಕ್ ಇವರು ಸಿತಾರ್ ನುಡಿಸಲಿದ್ದಾರೆ.
ದಿನಾಂಕ 09 ಮಾರ್ಚ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಸಂಗೀತ ಶಿಕ್ಷಕಿ ಶ್ವೇತಾ ವಿ. ನಾಯಕ್ ಶಿಷ್ಯ ವೃಂದದವರಿಂದ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ’, 4-00 ಗಂಟೆಗೆ ಮಂಗಳೂರಿನ ದಯಾಕರ ಭಟ್ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಗಂಟೆ 5-15ಕ್ಕೆ ಕಾರ್ಕಳದ ಸುರಮಣಿ ಮಹಾಲಕ್ಷ್ಮಿ ಶೆಣೈ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ರಾತ್ರಿ 7-00 ಗಂಟೆಗೆ ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಸ್ಮರಣಾರ್ಥ ನಡೆಯಲಿರುವ ‘ಶ್ರದ್ಧಾ ಸುಮನ’ ತಬ್ಲಾ ಜುಗಲ್ಬಂದಿಯನ್ನು ನವದೆಹಲಿಯ ಪಂಡಿತ್ ರಾಮ್ ಕುಮಾರ್ ಮಿಶ್ರ ಹಾಗೂ ರಾಹುಲ್ ಕುಮಾರ್ ಮಿತ್ರ ಇವರು ನಡೆಸಿಕೊಡಲಿದ್ದಾರೆ.
ಸಹ ಕಲಾವಿದರಾಗಿ ವಯೊಲಿನ್ ನಲ್ಲಿ ಕೇರಳದ ತಿರುವಿಜ್ಹ ವಿಜು ಎಸ್. ಆನಂದ್, ಕಾರ್ಕಳದ ಮಹತಿ ಕೆ., ಮೃದಂಗದಲ್ಲಿ ಬೆಂಗಳೂರಿನ ನಿಕ್ಷಿತ ಟಿ. ಪುತ್ತೂರು ಮತ್ತು ವಿದ್ವಾನ್ ವಾದಿರಾಜ ಭಟ್, ಹಾರ್ಮೋನಿಯಂಯಲ್ಲಿ ಕಟಪಾಡಿಯ ವಿದ್ವಾನ್ ಸತ್ವಿಜಯ ಭಟ್, ಕಾರ್ಕಳದ ಎ. ವಿಶ್ವನಾಥ ಭಟ್, ಉಡುಪಿಯ ಪ್ರಸಾದ್ ಕಾಮತ್ ಎಚ್. ಮತ್ತು ಉಡುಪಿ ಸಂಪ್ರೀತ್ ಶೆಣೈ, ತಬಲಾದಲ್ಲಿ ಹುಬ್ಬಳ್ಳಿಯ ಹೇಮಂತ ಜೋಷಿ, ಹರಿಖಂಡಿಗೆಯ ದೀಪಕ್ ನಾಯಕ್, ಮಂಗಳೂರಿನ ರಾಜೇಶ್ ಭಾಗವತ, ಪಡುಬಿದ್ರಿಯ ಪಿ. ಶ್ರೀವತ್ಸ ಶರ್ಮ, ಖಂಜೀರದಲ್ಲಿ ಬೆಂಗಳೂರಿನ ವಿದ್ವಾನ್ ಆರ್. ಕಾರ್ತಿಕ್ ಇವರುಗಳು ಸಹಕರಿಸಲಿದ್ದಾರೆ.