ಮುಂಡುಗೋಡು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಿದ್ದಿ ಸಮುದಾಯದವರನ್ನು ಮುಖ್ಯ ನೆಲೆಗೆ ತರುವ ಉದ್ದೇಶದಿಂದ ‘ಸಿದ್ದಿ ಸಮಾವೇಶ’ವನ್ನು ದಿನಾಂಕ 15 ಮತ್ತು 16 ಮಾರ್ಚ್ 2025ರಂದು ಮುಂಡುಗೋಡಿನ ಲೊಯೋಲಾ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಸಿದ್ದಿ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾತಂಡಗಳ ಪ್ರದರ್ಶನವು ಮೆರವಣಿಗೆಯೊಂದಿಗೆ ನಡೆಯಲಿದೆ. ‘ಸಿದ್ದಿ ಪರಂಪರೆ’, ‘ಸಿದ್ದಿಗಳ ಬದುಕಿನ ಆಯಾಮಗಳು (ಕಲೆ, ಸಂಸ್ಕೃತಿ)’, ‘ಸಿದ್ದಿಗಳ ಬದುಕು ನಿನ್ನೆ, ಇಂದು ಮತ್ತು ನಾಳೆ’, ‘21ನೇ ಶತಮಾನದಲ್ಲಿ ಸಿದ್ದಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳು/ ಸವಾಲುಗಳು ಮತ್ತು ಸಕಾರಾತ್ಮಕ ಸಾಧ್ಯತೆಗಳು’ ಎಂಬ ವಿಷಯಗಳಲ್ಲಿ ವಿಚಾರಗೋಷ್ಠಿಯು ವಿಭಾಗ ಮುಖ್ಯಸ್ಥರಾದ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.