ಹೆಗ್ಗೋಡು : ಕಿನ್ನರ ಮೇಳ ತುಮರಿ ಇವರ ವತಿಯಿಂದ ಕೆ.ಎಸ್. ರಾಜೇಂದ್ರನ್ ನೆನಪಿನ ಕಾರ್ಯಕ್ರಮವನ್ನು ದಿನಾಂಕ 22 ಮತ್ತು 23 ಮಾರ್ಚ್ 2025ರಂದು ಹೆಗ್ಗೋಡು ಭೀಮನಕೋಣೆ ಕಿನ್ನರ ಮೇಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 22 ಮಾರ್ಚ್ 2025ರಂದು ಸಂಜೆ 5-30 ಗಂಟೆಗೆ ರಾಜೇಂದ್ರನ್ ಸ್ಮರಣೆ ಮತ್ತು 7-00 ಗಂಟೆಗೆ ಕೆ.ಜಿ. ಕೃಷ್ಣಮೂರ್ತಿ ಇವರ ನಿರ್ದೇಶನದಲ್ಲಿ ‘ಸುದ್ದಿಯ ಮಾಯಾಜಾಲ’ ಕಿನ್ನರ ಮೇಳ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 23 ಮಾರ್ಚ್ 2025ರಂದು ಬೆಳಗ್ಗೆ 10-00 ಗಂಟೆಗೆ ನಟ ಮತ್ತು ನಿರ್ದೇಶಕ ಸುಧನ್ವ ದೇಶಪಾಂಡೆ ಇವರಿಂದ ‘ವಿಕೃತ ಜಗತ್ತಿನೊಳಗೆ ರಂಗಭೂಮಿ’ ಒಂದು ಸಚಿತ್ರ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 4-30 ಗಂಟೆಗೆ ಕೇರಳದ ನಿಧಿ ಎಸ್. ಶಾಸ್ತ್ರಿ ಇವರ ನಿರ್ದೇಶನದಲ್ಲಿ ‘ಇರುವೆ ಪುರಾಣ’ ಮಕ್ಕಳ ನಾಟಕ ಮತ್ತು ಸಂಜೆ 7-00 ಗಂಟೆಗೆ ದಾದಾನಟ್ಟಿ ಶ್ರೀ ಮಂಜುನಾಥ ಶ್ರೀಕೃಷ್ಣ ಪಾರಿಜಾತ ತಂಡದವರಿಂದ ‘ಶ್ರೀ ಕೃಷ್ಣ ಪಾರಿಜಾತ’ ಪ್ರಸ್ತುತಗೊಳ್ಳಲಿದೆ.