ಬೆಂಗಳೂರು : ‘ರಂಗವಾಹಿನಿ’ ಚಾಮರಾಜನಗರ ತಂಡವು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಪ್ರಸ್ತುತಪಡಿಸುವ ‘ಬೆಲ್ಲದ ದೋಣಿ’ ನಾಟಕದ ಪ್ರದರ್ಶನವು ದಿನಾಂಕ 27ಮಾರ್ಚ್ 2025ರಂದು ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಸಂಜೆ ಘಂಟೆ 6.30ಕ್ಕೆ ನಡೆಯಲಿದೆ.
ಬೆಲ್ಲದ ದೋಣಿ :
ನಾಟಕದಲ್ಲಿ ಸಮಾಜದಲ್ಲಿನ ಅನಿಷ್ಟ ಪದ್ದತಿಗಳಾದ ಜಾತಿಪದ್ದತಿ, ಜೀತಪದ್ದತಿ ಹಾಗೂ ಮೇಲು, ಕೀಳೆಂಬ ಅಸಮಾನತೆಯ ಕ್ರೂರ ವ್ಯವಸ್ಥೆಯಿಂದ ಹೊರಬರಲು ತೊಳಲಾಡುವ ಬಡ ಜೀವಗಳ ನೋವು, ಸಂಕಟ ಇದಲ್ಲದೆ ಸ್ವಾಭಿಮಾನದ ಬದುಕಿಗಾಗಿ ತವಕಿಸುವ ಆ ಬಡಜೀವಗಳು, ಆ ಬಡಜೀವಗಳ ಬಯಕೆ ಕೊನೆಗೆ ‘ಬೆಲ್ಲದದೋಣಿ’ಯಂತೆ ಕರಗಿಹೋಗುವುದನ್ನು ಈ ನಾಟಕ ವಿಭಿನ್ನವಾಗಿ ರಂಗರೂಪಕ್ಕಿಳಿಸಿದೆ. ಸ್ವಾಭಿಮಾನಿ ಬದುಕು ನಡೆಸಲು ಬುದ್ದರ ಮಾರ್ಗವನ್ನು ಅನುಸರಿಸಿ ಆ ಮಾರ್ಗದಲ್ಲಿ ಸಾಗುವ ಮಗ ಸಿದ್ದೇಶನ ಹಾದಿಯೇ ಸರಿಯಾದುದ್ದೆಂದು ಅರಿತ ತಂದೆ ಗಾವುರಯ್ಯನು ಕೊನೆಗೆ ತನ್ನ ಮಗನ ಹಾದಿಯನ್ನೆ ಅರಸಿ ಸಾಗುವನು ಆಗ ನಾಟಕಕ್ಕೆ ತೆರೆ ಬೀಳುವುದು…!
ಹನೂರು ಚೆನ್ನಪ್ಪ ರಚಿಸಿರುವ ಈನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ರೂಪಸ್ ಸಂಜಯ ನಿರ್ವಹಿಸಿದ್ದು, ದೇವಾನಂದವರಪ್ರಸಾದ್ ಸಂಗೀತ ನೀಡಿದ್ದಾರೆ. ಇವರೆಗೆ ಕೃಷ್ಣ ಚೈತನ್ಯ ಹಾಗೂ ಸಿದ್ದೇಶ್ ಬದನವಾಳು ಸಂಗೀತದಲ್ಲಿ ಸಹಕರಿಸಲಿದ್ದಾರೆ. ಪ್ರಶಾಂತ್ ಹೆಬ್ಬಾಸೂರು ನಾಟಕದ ರಂದ ಸಜ್ಜಿಕೆ ನಿರ್ವಹಿಸಲಿದ್ದು, ಗುರುರಾಜ್ ಪ್ರಸಾದನದಲ್ಲಿ ಸಹಕರಿಸಲಿದ್ದಾರೆ. ತಂಡದ ನಿರ್ವಹಣೆ ಸಿ.ಎಂ. ನರಸಿಂಹಮೂರ್ತಿ ಇವರದ್ದು.
ಹೆಚ್ಚಿನ ಮಾಹಿತಿಗಾಗಿ – 9916115263, 9164898896
1 Comment
ಧನ್ಯವಾದಗಳು ಸಾರ್