06 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ “ತುಳು ಹರಿಕಥಾ ಉಚ್ಚಯ -2023” ಏಪ್ರಿಲ್ 7 ರಿಂದ 11 ತಾರೀಕಿನವರೆಗೆ 5 ದಿನಗಳ ಕಾಲ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ತಾ. 07-04-2023 ಶುಕ್ರವಾರ ಸಂಜೆ ಗಂಟೆ 7-30 ಕ್ಕೆ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮೂಕಾಂಬಿಕಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಹರಿದಾಸ ಮಾಡೂರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ತದನಂತರ “ಅಮರ್ ಬೊಳ್ಳಿಲು” ಎಂಬ ಕಥಾ ಕೀರ್ತನೆಯನ್ನು ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ನಡೆಸಿ ಕೊಡುತ್ತಾರೆ.
ತಾ. 08-04-2023 ಶನಿವಾರ ಸಂಜೆ ಗಂಟೆ 7-30ಕ್ಕೆ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅಂಚನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. “ಭಕುತೆ ದಾಮಾಜಿ ಪಂತೆ” ಎಂಬ ಕಥಾ ಕೀರ್ತನೆಯನ್ನು ಡಾ. ಎಸ್.ಪಿ. ಗುರುದಾಸ್ ನಡೆಸಿ ಕೊಡುವವರಿದ್ದಾರೆ.
ತಾ. 09-04-2023 ಭಾನುವಾರ ಸಂಜೆ ಗಂಟೆ 7-30ಕ್ಕೆ ಮುಖ್ಯ ಅತಿಥಿಯಾಗಿ ಆಳ್ವಾಸ್ ಸ್ವೀಟ್ಸ್ ನ ಮಾಲಕರಾದ ಶ್ರೀ ಗಿರೀಶ್ ಆಳ್ವ ಮೋರ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಹರಿದಾಸರಾದ ದೇವಕೀತನಯ ಕೂಡ್ಲು ಇವರಿಂದ “ಸಿರಿದೇವಿ ಮೈಮೆ” ಎಂಬ ಕಥಾ ಕೀರ್ತನೆ ನಡೆಯಲಿದೆ.
ತಾ. 10-04-2023 ಸೋಮವಾರ ಸಂಜೆ ಗಂಟೆ 7-30ಕ್ಕೆ ದೇರಳಕಟ್ಟೆಯ ಹೊಟೇಲ್ ದಿ ಕಂಫರ್ಟ್ ಇನ್ ಇದರ ಮಾಲಕರಾದ ಲಯನ್ ಚಂದ್ರಹಾಸ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಆ ದಿನದ “ಗೋರ ಕುಂಬಾರೆ” ಕಥಾ ಕೀರ್ತನೆಯನ್ನು ಹರಿದಾಸರಾದ ಶ್ರೀಮತಿ ಮಂಜುಳಾ ಇರಾ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ತಾ. 11-04-2023 ಮಂಗಳವಾರ ಸಂಜೆ ಗಂಟೆ 7-30ಕ್ಕೆ ಸಮಾರೋಪ ಭಾಷಣ ಮಾಡುತ್ತಾರೆ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.)ದ ಅಧ್ಯಕ್ಷರಾದ ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಶ್ರೀ ಕೆ.ಟಿ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆ ದಿನ “ತಪ್ಪುಗು ತರೆದಂಡ” ಎಂಬ ಕಥಾ ಕೀರ್ತನೆಯನ್ನು ಶ್ರೀ ಯಜ್ಞೇಶ್ ಹೊಸಬೆಟ್ಟು ನಡೆಸಿಕೊಡುತ್ತಾರೆ.
ಶ್ರೀ ವಿವೇಕಾನಂದ ಸನಿಲ್, ಅಧ್ಯಕ್ಷರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಮತ್ತು ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಅಧ್ಯಕ್ಷರು ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಪ್ರೀತ್ಯಾದರದ ಸ್ವಾಗತ ಕೋರಿದ್ದಾರೆ.