ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಸಂಸ್ಥೆಯು ಯಕ್ಷಗಾನ ಕಲಾರಂಗದ ಐವೈಸಿಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಮುಖವರ್ಣಿಕೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 18 ಏಪ್ರಿಲ್ 2025 ರಂದು ನಡೆಯಿತು.
ಗುರು ಸಂಜೀವ ಸುವರ್ಣರ ನೇತೃತ್ವದಲ್ಲಿ ಯಕ್ಷಗಾನ ಗುರುಗಳಾದ ನರಸಿಂಹ ತುಂಗ ಮತ್ತು ಪ್ರಸಾಧನ ತಜ್ಞ ಮಿಥುನ್ ನಾಯಕ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎ. ರಘುಪತಿ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ನಾರಾಯಣ ಎಂ. ಹೆಗಡೆ, ಅನಂತರಾಜ್ ಉಪಾಧ್ಯ, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ, ಸಂಯೋಜಕ ನಿರಂಜನ್ ಭಟ್ ವಂದಿಸಿದರು.
ಶಿಬಿರಾರ್ಥಿಗಳ ಪರವಾಗಿ ಸೃಷ್ಟಿ ಮತ್ತು ಆರುಷ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ನಾಲ್ಕು ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ವಿವಿಧ ವೇಷಗಳ ಮುಖವರ್ಣಿಕೆ, ಕಸೆ, ಗೆಜ್ಜೆ ಮತ್ತು ವೇಷಭೂಷಣ ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು. ಎಲ್ಲಾ ಶಿಬಿರಾರ್ಥಿಗಳಿಗೆ ತಮ್ಮ ಮನೆಯಲ್ಲಿ ಅಭ್ಯಾಸ ಮಾಡಲು ಪೂರಕವಾಗುವಂತೆ ಬಣ್ಣದ ಕಿಟ್ ಅದರೊಂದಿಗೆ ಬ್ಯಾಗ್, ಕೊಡೆ, ಪುಸ್ತಕ ವಿತರಿಸಲಾಯಿತು. 19 ಜನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
Subscribe to Updates
Get the latest creative news from FooBar about art, design and business.
Previous Articleರಂಗಮನೆ ಚಿಣ್ಣರಮೇಳ ಸಮಾರೋಪದಲ್ಲಿ ರಂಗೇರಿದ 7 ನಾಟಕಗಳು, 140 ಕಲಾವಿದರು