ಮಂಗಳೂರು : ಕೆನರಾ ಕಾಲೇಜು ಹಾಗೂ ಅಖಿಲ ಭಾರತೀಯ ಸಾಹಿತ್ಯ ಷರಿಷದ್ ಮಂಗಳೂರು ತಾಲೂಕು ಆಯೋಜಿಸಿದ ಉಪನ್ಯಾಸಕಿ ಶ್ರೀಮತಿ ಶೈಲಜಾ ಪುದುಕೋಳಿಯವರ ‘ಕನವರಿಕೆ’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 21 ಏಪ್ರಿಲ್ 2025ರಂದು ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುಸ್ತಕ ಲೋಕಾರ್ಪಣೆಗೊಳಿಸಿದ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಮಾತನಾಡಿ “ಭಾಷಾ ಪ್ರಾಧ್ಯಾಪಕರ ಪಾಠ ಪ್ರವಚನಗಳನ್ನು ಕೇಳುವುದೇ ಖುಷಿಯ ವಿಷಯ,. ಅವರ ಭಾಷಾ ಪ್ರೌಢಿಮೆ, ಪದಗಳ ಜೋಡಣೆ ಬಹಳ ಅಥ೯ಪೂಣ೯ ಹಾಗೂ ಸುಂದರ” ಎಂದರು
ಕೆನರಾ ಪ. ಪೂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಅಮೃತ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು ಅವರು ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೆನರಾ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ದೀಪ್ತಿ ನಾಯಕ್, ಕೆನರಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು, ಲೇಖಕಿ ಶ್ರೀಮತಿ ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಇದರ ಉಪಾಧ್ಯಕ್ಷರಾದ ಶ್ರೀ ನರಸಿಂಹ ಶೆಟ್ಟಿ ವಂದನಾರ್ಪಣೆಗೈದರು. ಸಭೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ಜಿಲ್ಲಾಧ್ಯಕ್ಷರಾದ ಶ್ರೀ ಹರೀಶ್ ರೈ ಪಿ. ಬಿ. ಉಪಸ್ಥಿತರಿದ್ದರು. ಅ. ಭಾ. ಸಾ. ಪ. ಮಂಗಳೂರು ಸಮಿತಿಯ ಪದಾಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾಯ೯ಕ್ರಮಕ್ಕೆ ಸಾಕ್ಷಿಯಾದರು.
ಕಾಯ೯ಕ್ರಮದ ಮೊದಲಿಗೆ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾಥ೯ನೆ ಗೀತೆಯನ್ನು ಹಾಡುವುದರ ಮೂಲಕ ಆರಂಭಗೊಂಡು, ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಕಾಯ೯ಕ್ರಮವು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿ ಶ್ರೀ ಅಭಿಷೇಕ್ ಪಾಟೀಲ್ ಕಾಯ೯ಕ್ರಮವನ್ನು ನಿವ೯ಹಿಸಿದರು.