ಧಾರವಾಡ : ಅಭಿನಯ ಭಾರತಿಯು ತನ್ನ ನಾಲ್ಕು ದಶಕಗಳ ಅನುಭವದ ಪರಿಪಾಕದೊಂದಿಗೆ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಧಾರವಾಡದ ಕಲಾ ರಸಿಕರಿಗೆ ‘ನಗೆ ಹಬ್ಬ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಾಸ್ಯದ ರಸದೌತಣ ನೀಡಲಿದೆ.
ದಿನಾಂಕ 26 ಏಪ್ರಿಲ್ 2025ರ ಶನಿವಾರ ಹಾಗೂ 27 ಏಪ್ರಿಲ್ 2025ರ ರವಿವಾರದಂದು ಬೆಂಗಳೂರಿನ “ಅಂತರಂಗ- ಬಹಿರಂಗ” ತಂಡದವರು ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಾಲ್ಕು ಹಾಸ್ಯರಸ ಪೂಣ೯ ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಶನಿವಾರ ದಿನಾಂಕ 26ರಂದು ಸಂಜೆ 4.15 ಗಂಟೆಗೆ ನಾಟಕೋತ್ಸವದ ಮೊದಲ ನಾಟಕ ‘ಅನುಮಾನದ ಅವಾಂತರ’ ಶ್ರೀ ರಿಜವಾನ ಇನಾಮದಾರ-ಕೋಟಕ್ ಇನ್ಶುರೆನ್ಸನ ಅಧಿಕಾರಿಗಳಿಂದ ಹಾಗೂ ಸಂಜೆ 6.15 ಗಂಟೆಗೆ ಎರಡನೇ ನಾಟಕ “ಯಥಾ ಪ್ರಕಾರ” ಶ್ರೀ ಪಿ. ಎಮ್ ಕುಲಕರ್ಣಿ, ಅಧ್ಯಕ್ಷರು “ಭಗೀರಥ ಸ್ವಯಂ ಸೇವಾ ಸಂಸ್ಥೆ” ಇವರಿಂದ ಮತ್ತು ರವಿವಾರ ದಿನಾಂಕ 27ರಂದು ಸಂಜೆ 4.15 ಗಂಟೆಗೆ “ಬಾಯಿ ತುಂಬಾ ನಕ್ಕು ಬಿಡಿ” ನಾಟಕ ಶ್ರೀ ನಾರಾಯಣ ಎಮ್. ನಿವೃತ್ತ ಮುಖ್ಯ ಅಭಿಯಂತರರು ಹಾಗೂ ತಾಂತ್ರಿಕ ಸಲಹೆಗಾರರು ಇವರಿಂದ ಹಾಗೂ 6.15 ಗಂಟೆಗೆ “ಮಿ.ರಾವ್ & ಅಸೋಸಿಯೇಟ್ಸ” ನಾಟಕ ಅರುಣ್ ಪಾಟೀಲ್, ಬೆಳಗಾವಿ ಇವರಿಂದ ಉದ್ಘಾಟನೆಗೊಳ್ಳಲಿವೆ.
ನಾಲ್ಕೂ ನಾಟಕಗಳು ಚಿಕ್ಕ ಚೊಕ್ಕ ನಾಟಕಗಳಾಗಿದ್ದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿವೆ. ಎರಡೂ ದಿನಗಳಂದು ಮಧ್ಯಂತರದಲ್ಲಿ ಅಂದರೆ 6.00 ಗಂಟೆಯಿಂದ 6.30 ರೊಳಗೆ ಉಚಿತ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಾಲ್ಕೂ ನಾಟಕಗಳ ರಸದೌತಣಕ್ಕೆ ಅಭಿಮಾನಿ ಪ್ರೇಕ್ಷಕರು ಪ್ರತಿ ನಾಟಕಕ್ಕೆ 200 ರೂ ಪಾವತಿಸಿ ಪ್ರವೇಶ ಪತ್ರಗಳನ್ನು ಪಡೆಯಬಹುದು. 500 ರೂ ನೀಡಿ ಅಭಿನಯ ಭಾರತಿಯ ಸದಸ್ಯತ್ವ ಪಡೆದು ಸದಸ್ಯರು ವರ್ಷದ ಎಲ್ಲ ಚಟುವಟಿಕೆಗಳಿಗೂ ಹಾಗೂ ವರ್ಷದುದ್ದಕ್ಕೂ ನಡೆಯುವ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ ಪಡೆಯಬಹುದು. ಧಾರವಾಡದ ಸುಸಂಸ್ಕೃತ ರಂಗಪ್ರಿಯರು ಈ ನಾಟಕಗಳನ್ನು ನೋಡಿ ವಸಂತ ಮಾಸದ ಮಧುರ ಅನುಭವ ಪಡೆಯಬೇಕೆಂದು ಸಂಚಾಲಕರು ವಿನಂತಿಸುತ್ತಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಕಲಾಭಿಮಾನಿಗಳು ಅಧ್ಯಕ್ಷರಾದ ಶ್ರೀ ಅರವಿಂದ್ ಕುಲಕರ್ಣಿ – 8073479394, ಕಾರ್ಯದರ್ಶಿ ಶ್ರೀ ಸಮೀರ್ ಜೋಶಿ – 98454 47002 ಅಥವಾ ಸಂಚಾಲಕರಾದ ಜ್ಯೋತಿ ಪುರಾಣಿಕ್ ದಿಕ್ಷಿತ – 99450 23994 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
Previous Articleಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ತುಳುನಾಡ ಸಿರಿ ‘ಮದಿಪು’
Next Article ಸಮಾರೋಪಗೊಂಡ ರಂಗ ಸ್ವರೂಪದ 20ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ