ಬೆಂಗಳೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಗೌರವ ಕಾರ್ಯದರ್ಶಿ ಶ್ರೀ ರಂಗನಾಥ ರಾವ್ ಇವರ ಸಹಸ್ರ ಚಂದ್ರ ದರ್ಶನ ಶಾಂತಿ ಅಂಗವಾಗಿ ಬೆಂಗಳೂರಿನ ಅಕ್ಷಯ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಿನಾಂಕ 28 ಏಪ್ರಿಲ್ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಾಳಮದ್ದಳೆ ಕಾರ್ಯಕ್ರಮವು ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಪ್ರಸಾದ್ ಕಲ್ಲೂರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಕ್ಷಯ್ ರಾವ್ ವಿಟ್ಲ ಮತ್ತು ಶಿಖಿನ್ ಶರ್ಮ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀರಾಮ), ಶುಭಾ ಅಡಿಗ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶುಭಾ ಗಣೇಶ್ (ವೃದ್ಧ ವಿಪ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪ್ರೇಮಲತಾ ರಂಗನಾಥ ರಾವ್ ದಂಪತಿಗಳು ಹಾಗೂ ಮಕ್ಕಳು ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ಇತ್ತು ಗೌರವಿಸಿದರು.