ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ‘ಡಾ. ಡಿ.ಕೆ. ಚೌಟರ ನೆನಪಿನ ನಾಟಕೋತ್ಸವ -2025’ ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕಲಾ ನಿರ್ದೇಶಕರಾದ ಸುದೇಶ್ ಮಹಾನ್, ಹಿರಿಯ ರಂಗಭೂಮಿ ಕಲಾವಿದರಾದ ಪ್ರೇಮ್ ದಾಸ್ ಅಡ್ಯಂತಾಯ, ರಂಗಭೂಮಿ ಕಲಾವಿದರಾದ ಗೀತಾ ಸುರತ್ಕಲ್, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ರೇಣುಕ ರೆಡ್ಡಿ ಮತ್ತು ರಂಗಕರ್ಮಿ ಡಾ. ರಮ್ಯಾ ನವೀನ್ ಕೃಷಿ ಇವರುಗಳನ್ನು ರಂಗಗೌರವ ನೀಡಿ ಗೌರವಿಸಲಾಗವುದು.
ಸಂಜೆ 4-00 ಗಂಟೆಗೆ ರೂಪಾಂತರ ತಂಡ ಪ್ರಸ್ತುತಪಡಿಸುವ ಜಯಲಕ್ಷ್ಮಿ ಪಾಟೀಲ್ ಹುಬ್ಬಳ್ಳಿ ರಚಿಸಿರುವ ಖ್ಯಾತ ಅಭಿನೇತ್ರಿ ಕಲ್ಪನಾ ಜೀವನಗಾಥೆ ಕುರಿತ ಏಕವ್ಯಕ್ತಿ ಪ್ರದರ್ಶನ ‘ಮಿನುಗುತಾರೆ’ ನಾಟಕ ಪ್ರದರ್ಶನಗೊಳ್ಳಲಿದೆ. ರಂಜಿತಾ ಸೂರ್ಯವಂಶಿ ಅಭಿನಯ ಮಾಡಲಿದ್ದು, ಜಿ.ಪಿ.ಓ. ಚಂದ್ರು ನಿರ್ವಹಣೆ ಹಾಗೂ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನ ಮಾಡಿರುತ್ತಾರೆ. 5-30 ಗಂಟೆಗೆ ಬೆಂಗಳೂರಿನ ರಂಗಪಯಣ ತಂಡದವರಿಂದ ರಂಗ ಗೀತೆಗಳು ಪ್ರಸ್ತುತಗೊಳ್ಳಲಿದೆ. ರಾತ್ರಿ 7-15 ಗಂಟೆಗೆ ದೃಶ್ಯ ಕಾವ್ಯ ತಂಡ ಪ್ರಸ್ತುತ ಪಡಿಸುವ ಡಿ.ಕೆ. ಚೌಟ ರಚನೆಯ ‘ಹುಲಿ ಹಿಡಿದ ಕಡಸು’ ಎಂಬ ನಾಟಕ ನಂಜುಂಡೇಗೌಡ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.