ಹಂಪಿ : ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಷಾಂತರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಆಯೋಜಿಸುವ ‘ಪ್ರೊ. ಮೋಹನ ಕುಂಟಾರ್ ದತ್ತಿನಿಧಿ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ’ವನ್ನು ದಿನಾಂಕ 30 ಮೇ 2025ರಂದು ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9-30 ಗಂಟೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಂಚಾಲಕರಾದ ಡಾ. ಸುಬ್ರಾವ ಎಂಟೆತ್ತಿನವರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ‘ಅನುವಾದದ ಹೆಜ್ಜೆಗುರುತು’ ಎಂಬ ಕೃತಿಯನ್ನು ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಇವರು ಲೋಕಾರ್ಪಣೆ ಮಾಡಲಿದ್ದು, ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ದತ್ತಿನಿಧಿ ಉಪನ್ಯಾಸದಲ್ಲಿ ‘ಮೋಹನ ಕುಂಟಾರ್ ವ್ಯಕ್ತಿತ್ವ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ವಿಶ್ವನಾಥ ನಾಗಠಾಣ ಇವರು ವಿಷಯ ಮಂಡನೆ ಮಾಡುವರು. ಮೋಹನ ಕುಂಟಾರ್ ಅವರ ಸಾಹಿತ್ಯ’ ಎಂಬ ವಿಚಾರ ಗೋಷ್ಠಿಯಲ್ಲಿ ‘ಸೃಜನಶೀಲ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಸಾಹಿತಿ ಡಾ. ಸುಬ್ರಾವ ಎಂಟೆತ್ತಿನವರ, ‘ಸಾಹಿತ್ಯ ಸಂಶೋಧನೆ’ ಎಂಬ ವಿಷಯದ ಬಗ್ಗೆ ಪ್ರಾಚಾರ್ಯರಾದ ಡಾ. ಫಕೀರಪ್ಪ ವಜ್ರಬಂಡಿ, ‘ಅನುವಾದಗಳ ಅಧ್ಯಯನ’ ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ, ‘ಅನುವಾದಗಳು’ ಎಂಬ ವಿಷಯದ ಬಗ್ಗೆ ಸಹ ಶಿಕ್ಷಕರಾದ ಡಾ. ಪ್ರದೀಪ್ ಎಸ್., ‘ಭಾಷೆ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಸಹ ಶಿಕ್ಷಕರಾದ ಸಂಗಮೇಶ ಮುತ್ತಗಿ, ‘ಯಕ್ಷಗಾನ ಸಂಶೋಧನೆ’ ಎಂಬ ವಿಷಯದ ಬಗ್ಗೆ ಸಂಶೋಧಕ ದೇವಿಂದ್ರಪ್ಪ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದೆ.