ಕುಷ್ಟಗಿ : ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ತಾಲೂಕು ಹಾಗೂ ‘ಸಂಗಾತ ಪುಸ್ತಕ’ ಪ್ರಕಾಶನ ಇವರ ಸಹಯೋಗದೊಂದಿಗೆ ಮೌನೇಶ ನವಲಹಳ್ಳಿ ಇವರ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮವನ್ನು ದಿನಾಂಕ 08 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಕುಷ್ಟಗಿಯ ಬಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಐ.ಜೆ. ಮ್ಯಾಗೇರಿ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕುಷ್ಟಗಿ ಕ.ಸಾ.ಪ.ದ ಅಧ್ಯಕರಾದ ಲೆಂಕೆಪ್ಪ ವಾಲಿಕಾರ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಿಂಧನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ಇವರು ಕಾದಂಬರಿ ಲೋಕಾರ್ಪಣೆಗೊಳಿಸಲಿದ್ದು, ಅಕ್ಷರ ಸಂಗಾತದ ಸಂಪಾದಕರಾದ ಡಾ. ಟಿ.ಎಸ್. ಗೊರವರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಮಹೇಶ ಬಳ್ಳಾರಿ, ಡಾ. ವಸಂತಕುಮಾರ ಕಡ್ಲಿಮಟ್ಟಿ, ಜಹಾನ್‌ಅರಾ ಕೋಳೂರು, ಶ್ರೀಕಾಂತ ಬೆಟಗೇರಿ, ಮಹಾಂತೇಶ ಹಿರೇಕುರುಬರ, ಅಶೋಕ ಹೊಸಮನಿ, ರವಿ ದೇವರೆಡ್ಡಿ, ರವಿ ಹಾದಿಮನಿ, ದೇವರಾಜ ವಿಶ್ವಕರ್ಮ, ಶಿವನಗೌಡ ಪೊಲೀಸ್ ಪಾಟೀಲ್, ಮಹಾಂತೇಶ ಗೆದಗೇರಿ ಶರಣಪ್ಪ ಲೈನದ, ಮಹೇಶ ಹಡಪದ ಇವರುಗಳು ಕಾದಂಬರಿ ಅವಲೋಕನ ಮಾಡಲಿದ್ದಾರೆ.