14-04-2023,ಮಂಗಳೂರು: ಉಡುಪಿಯ ಚಿತ್ರ ಕಲಾವಿದ ಸಕು ಅವರ ಶಿಲ್ಪ ಕಲಾಕೃತಿ (ರಿಲೀಫ್)ಗಳ ಪ್ರದರ್ಶನ ಹ್ಯುಮಾನೆ -2 ಮಂಗಳೂರಿನ ಬಲ್ಲಾಳ್ ಬಾಗ್‌ನ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 14-04-2023ರಂದು ಉದ್ಘಾಟನೆಗೊಂಡಿತು. ಈ ಶಿಲ್ಪಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಆನಂದ ಕೆ. ಉದ್ಘಾಟಿಸಿದರು. ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಮ್ ಪೂಜಾರಿ, ಡಾ| ಟಿ.ಡಿ. ರಾಮಮೂರ್ತಿ, ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕರಾದ ಕೋಟಿ ಪ್ರಸಾದ್ ಆಳ್ವ, ಹಿರಿಯ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ಭಾಗವಹಿಸಿದರು
ಚಿತ್ರ ಕಲಾವಿದ ಸಕು ಪಾಂಗಾಳ ಅವರು ಮಾತನಾಡಿ ’’ಈ ಶಿಲ್ಪ ಕಲಾಕೃತಿಗಳು ಕಪ್ಪೆ ಬೊಂಡಾಸ್ ಮೀನಿನ ಚಿಪ್ಪಿನಿಂದ (cuttlefish bone) ಮಾಡಲಾಗಿದೆ. 1997 ರಿಂದಲೇ ಕಡಲ ಬದಿಯಲ್ಲಿ ಸಿಗುವ ಈ ನಿರುಪಯುಕ್ತ ವಸ್ತುವಿನಿಂದ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದು ಇದರ ಮೊದಲ ಪ್ರದರ್ಶನ ಏಪ್ರಿಲ್ 3 ರಿಂದ 9 ರ ವರೆಗೆ ಉಡುಪಿಯಲ್ಲಿ ಯಶಸ್ವಿಯಾಗಿ ನಡೆದಿದೆ’’ ಎಂದರು. .
ಈ ಪ್ರದರ್ಶನ ದಲ್ಲಿ 30 ಕಲಾಕೃತಿಗಳಿದ್ದು ಇದರಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಬಂದ ಮೊತ್ತವನ್ನು ಕನ್ನಡ ಶಾಲೆಯ ಮಕ್ಕಳ ಕಲಿಕೆಗೆ ಉಪಯೋಗವಾಗುವಂತಹ ಶಬ್ಧಕೋಶಗಳನ್ನು ನೀಡುವ ಯೋಜನೆ ಹಮ್ಮಿಕೊಂಡಿದ್ದಾರೆ.
ಈ ಪ್ರದರ್ಶನವು ಏಪ್ರಿಲ್ 14 ರಿಂದ 16ರ ವರೆಗೆ ನಡೆಯಲಿದೆ .