17-04-2023,ಮಂಗಳೂರು: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಬೊಕ್ಕಪಟ್ಟಣದ ಸಮೀಪ ನದಿ ಕಿನಾರೆಯಲ್ಲಿ ದಿನಾಂಕ 15-04-2023 ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆಶು ಚಿತ್ರ ಕಲಾಶಿಬಿರ ಏರ್ಪಡಿಸಲಾಗಿತ್ತು.
ಉದ್ಘಾಟಕರಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ (ಪರೀಕ್ಷಾಂಗ) ಪ್ರೊ|ಪಿ.ಎಲ್ ಧರ್ಮ ಅವರು ಮಾತನಾಡಿ, ಕರಾವಳಿ ಚಿತ್ರಕಲಾ ಚಾವಡಿ ಕಳೆದ 30 ವರ್ಷಗಳಿಂದ ನಿರಂತರ ಮಂಗಳೂರಿನ ಜನತೆಗೆ ನೂರಾರು ಚಿತ್ರಕಲಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿದ್ದಾರೆ ಎಂದರು.
ವಿಶ್ವಕಲಾ ದಿನಾಚರಣೆಯನ್ನು ಇಡೀ ಜಗತ್ತಿನ ಕಲಾವಿದರು ಆಚರಿಸುತ್ತಿರುವಾಗ ಮಂಗಳೂರಿನ ಕಲಾವಿದರು ಸ್ಥಳದಲ್ಲೇ ಚಿತ್ರರಚನೆ ಮಾಡುವಂತದ್ದು ಕಲಾವಿದರು. ವೈಯಕ್ತಿಕವಾಗಿ ಬೆಳೆಯಲು ಮತ್ತು ಸಮಾಜಕ್ಕೆ ಸಮಾಜದ ಜನರಿಗೆ ಚಿತ್ರಕಲೆಯ ಪರಿಚಯ ನೀಡಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ದಿವಾಕರ್ ಕದ್ರಿ ಮಾತನಾಡಿ, ಇಂತಹ ಕಲಾಮೇಳ ಶಿಬಿರ ಮನಸ್ಸಿಗೆ ಮುದ ಕೊಡುವಂತದ್ದು ಇಂತಹ ಸುಂದರ ಪ್ರೇಕ್ಷಣೀಯ ಸ್ಥಳದಲ್ಲಿ ಏರ್ಪಟಿಸಿದ್ದರಿಂದ ಜನತೆಗೆ ಪ್ರವಾಸಿಗಳಿಗೆ ನೀಡಿದಂತಾಗುತ್ತದೆ ಎಂದರು.
ಭಾಗವಹಿಸಿದ ಕಲಾವಿದರಿಗೆ ಎಲ್ಲರಿಗೂ ಕ್ಯಾನ್ವಾಸ್ ನೀಡಿ ಪ್ರೋತ್ಸಾಹಿಸಿದರು. ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಅವರು ಸ್ಥಳದಲ್ಲೇ ಚಿತ್ರ ರಚಿಸುವ ಮಹತ್ವದ ಪ್ರಯೋಜನಗಳನ್ನು ವಿವರಿಸಿ ಅಲ್ಲಿನ ದೃಶ್ಯದ ಜಲ ವರ್ಣ ಪ್ರಾತ್ಯಕ್ಷಿಕೆ ನೀಡಿದರು.
ಅಧ್ಯಕ್ಷ ಕೋಟಿ ಪ್ರಸಾದ ಆಳ್ವ ಹಾಗೂ ಡಾ|ಎಸ್.ಎಂ.ಶಿವಪ್ರಕಾಶ್ ನಿರೂಪಿಸಿ ವಂದಿಸಿದರು.
13 ಕಲಾವಿದರು ಸ್ಥಳದಲ್ಲಿಯೇ ಕುಳಿತು ಜಲವರ್ಣ ಹಾಗೂ ಎಕ್ರಿಲಿಕ್ ಮಾಧ್ಯಮದಲ್ಲಿ ಚಿತ್ರ ರಚಿಸಿದರು. ಶಿಬಿರದಲ್ಲಿ ಗಣೇಶ ಸೋಮಯಾಜಿ, ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವರ್, ಡಾ|ಜಯಪ್ರಕಾಶ್,. ಆರುಣ್ ಕಾರಂತ್, ನವೀನ ಬಂಗೇರ, , ನವೀನ್ ಕೋಡಿಕಲ್, ಜೀವನ್ ಕುಮಾರ್ ಕದ್ರಿ, ಡಾ|ಎಸ್.ಎಂ.ಶಿವಪ್ರಕಾಶ್,ಸಪ್ನ ನೊರೋನ್ಹ ಭಾಗವಹಿಸಿದರು .