Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಬಾರ್ಯದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ

    February 7, 2026

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಕುಂದಾಪುರ ಸರಕಾರಿ ಕಾಲೇಜಿನಲ್ಲಿ ‘ಪುಂಡಲೀಕ ಹಾಲಂಬಿ ದತ್ತಿ ಪ್ರಶಸ್ತಿ ಪ್ರದಾನ | ಫೆಬ್ರವರಿ 14

    February 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ನದಿ ಕಿನಾರೆಯಲ್ಲಿ ವಿಶ್ವಕಲಾ ದಿನಾಚರಣೆಯ ಅಂಗವಾಗಿ ‘ಆಶು ಚಿತ್ರಕಲಾ ಶಿಬಿರ’
    News

    ಮಂಗಳೂರು ನದಿ ಕಿನಾರೆಯಲ್ಲಿ ವಿಶ್ವಕಲಾ ದಿನಾಚರಣೆಯ ಅಂಗವಾಗಿ ‘ಆಶು ಚಿತ್ರಕಲಾ ಶಿಬಿರ’

    April 18, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    17-04-2023,ಮಂಗಳೂರು: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಬೊಕ್ಕಪಟ್ಟಣದ ಸಮೀಪ ನದಿ ಕಿನಾರೆಯಲ್ಲಿ ದಿನಾಂಕ 15-04-2023 ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆಶು ಚಿತ್ರ ಕಲಾಶಿಬಿರ ಏರ್ಪಡಿಸಲಾಗಿತ್ತು.

    ಉದ್ಘಾಟಕರಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ (ಪರೀಕ್ಷಾಂಗ) ಪ್ರೊ|ಪಿ.ಎಲ್ ಧರ್ಮ ಅವರು ಮಾತನಾಡಿ, ಕರಾವಳಿ ಚಿತ್ರಕಲಾ ಚಾವಡಿ ಕಳೆದ 30 ವರ್ಷಗಳಿಂದ ನಿರಂತರ ಮಂಗಳೂರಿನ ಜನತೆಗೆ ನೂರಾರು ಚಿತ್ರಕಲಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿದ್ದಾರೆ ಎಂದರು.
    ವಿಶ್ವಕಲಾ ದಿನಾಚರಣೆಯನ್ನು ಇಡೀ ಜಗತ್ತಿನ ಕಲಾವಿದರು ಆಚರಿಸುತ್ತಿರುವಾಗ ಮಂಗಳೂರಿನ ಕಲಾವಿದರು ಸ್ಥಳದಲ್ಲೇ ಚಿತ್ರರಚನೆ ಮಾಡುವಂತದ್ದು ಕಲಾವಿದರು. ವೈಯಕ್ತಿಕವಾಗಿ ಬೆಳೆಯಲು ಮತ್ತು ಸಮಾಜಕ್ಕೆ ಸಮಾಜದ ಜನರಿಗೆ ಚಿತ್ರಕಲೆಯ ಪರಿಚಯ ನೀಡಿದಂತಾಗುತ್ತದೆ ಎಂದರು.

    ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ದಿವಾಕರ್ ಕದ್ರಿ ಮಾತನಾಡಿ, ಇಂತಹ ಕಲಾಮೇಳ ಶಿಬಿರ ಮನಸ್ಸಿಗೆ ಮುದ ಕೊಡುವಂತದ್ದು ಇಂತಹ ಸುಂದರ ಪ್ರೇಕ್ಷಣೀಯ ಸ್ಥಳದಲ್ಲಿ ಏರ್ಪಟಿಸಿದ್ದರಿಂದ ಜನತೆಗೆ ಪ್ರವಾಸಿಗಳಿಗೆ ನೀಡಿದಂತಾಗುತ್ತದೆ ಎಂದರು.
    ಭಾಗವಹಿಸಿದ ಕಲಾವಿದರಿಗೆ ಎಲ್ಲರಿಗೂ ಕ್ಯಾನ್ವಾಸ್ ನೀಡಿ ಪ್ರೋತ್ಸಾಹಿಸಿದರು. ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಅವರು ಸ್ಥಳದಲ್ಲೇ ಚಿತ್ರ ರಚಿಸುವ ಮಹತ್ವದ ಪ್ರಯೋಜನಗಳನ್ನು ವಿವರಿಸಿ ಅಲ್ಲಿನ ದೃಶ್ಯದ ಜಲ ವರ್ಣ ಪ್ರಾತ್ಯಕ್ಷಿಕೆ ನೀಡಿದರು.
    ಅಧ್ಯಕ್ಷ ಕೋಟಿ ಪ್ರಸಾದ ಆಳ್ವ ಹಾಗೂ ಡಾ|ಎಸ್.ಎಂ.ಶಿವಪ್ರಕಾಶ್ ನಿರೂಪಿಸಿ ವಂದಿಸಿದರು.
    13 ಕಲಾವಿದರು ಸ್ಥಳದಲ್ಲಿಯೇ ಕುಳಿತು ಜಲವರ್ಣ ಹಾಗೂ ಎಕ್ರಿಲಿಕ್‌ ಮಾಧ್ಯಮದಲ್ಲಿ ಚಿತ್ರ ರಚಿಸಿದರು. ಶಿಬಿರದಲ್ಲಿ ಗಣೇಶ ಸೋಮಯಾಜಿ, ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವರ್, ಡಾ|ಜಯಪ್ರಕಾಶ್,. ಆರುಣ್ ಕಾರಂತ್, ನವೀನ ಬಂಗೇರ, , ನವೀನ್ ಕೋಡಿಕಲ್, ಜೀವನ್ ಕುಮಾರ್ ಕದ್ರಿ, ಡಾ|ಎಸ್.ಎಂ.ಶಿವಪ್ರಕಾಶ್,ಸಪ್ನ ನೊರೋನ್ಹ ಭಾಗವಹಿಸಿದರು .

    Share. Facebook Twitter Pinterest LinkedIn Tumblr WhatsApp Email
    Previous Article‘ಕೃಷ್ಣ ಸಿಗಲಿಲ್ಲ’ ಕವನ ಸಂಕಲನ ಲೋಕಾರ್ಪಣೆ
    Next Article ‘ಬಹುಮುಖಿ ಪಾತ್ರಪ್ರವೀಣ’ ದಿನೇಶ್ ನಾಯ್ಕ
    roovari

    Add Comment Cancel Reply


    Related Posts

    ಎನ್.ಐ.ಟಿ.ಕೆ.ಯಲ್ಲಿ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರ | ಫೆಬ್ರುವರಿ 4ರಿಂದ 8  

    February 3, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    ಕಲಾರಾಧಕರನ್ನು ಮಂತ್ರಮುಗ್ಧರನ್ನಾಗಿಸಿದ ‘ನೃತ್ಯೋತ್ಕ್ರಮಣ’ ಭರತನಾಟ್ಯ ಕಾರ್ಯಕ್ರಮ

    January 19, 2026

    ವಿಮರ್ಶೆ | ಗಾನ ಮೋಡಿ- ‘ಸಂಭ್ರಮ’ ಪ್ರಶಸ್ತಿ – ಸಾರ್ಥಕ ‘ನಿರಂತರ’ ಕಲಾಸಾಧನೆ

    January 8, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.