ತೆಕ್ಕಟ್ಟೆ: ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ಚಿತ್ರಕಲಾ ತರಗತಿಯಲ್ಲಿ ಗುರುಗಳಿಗೆ ಗೌರವ ಅಭಿನಂದನೆ ಕಾರ್ಯಕ್ರಮವು ದಿನಾಂಕ 14 ಜುಲೈ 2025 ರಂದು ನಡೆಯಿತು.
ಸಮಾರಂಭದಲ್ಲಿ ಗೌರವ ಅಭಿನಂದನೆಗೊಳಗಾದ ಚಿತ್ರಕಲಾ ಗುರು ಗಿರೀಶ್ ವಕ್ವಾಡಿ ಮಾತನಾಡಿ “ಗುರುವೆಲ್ಲರೂ ಶಿಷ್ಯನ ಏಳ್ಗೆಯನ್ನೇ ಬಯಸುತ್ತಾರೆ. ನಮ್ಮೆಲ್ಲರನ್ನು ತಿದ್ದಿ ತೀಡಿದ ಗುರುವನ್ನು ಸ್ಮರಿಸಬೇಕಾದದ್ದು ಬದುಕಿನ ಬಹು ಮುಖ್ಯ ಅಂಶ. ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಗುರು ಮಾಡುತ್ತಾನೆ. ನಮಗಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ನೀತಿಯನ್ನು ಗುರು ತಿಳಿಸುತ್ತಾನೆ. ಗುರು ಪೂರ್ಣಿಮೆಯಂದು ಗೌರವ ಅಭಿನಂದನೆಗೊಳಗಾದ ನಾನೇ ಧನ್ಯ. ಶಿಷ್ಯರನೇಕರ ಉಪಸ್ಥಿತಿಯಲ್ಲಿ ಅಭಿನಂದನೆಗೊಳಗಾದದ್ದು ನನಗೆ ಹಿತವೆನಿಸಿದೆ. ಶಿಷ್ಯನ ಸರ್ವತೋಮುಖ ಅಭಿವೃದ್ಧಿಯೇ ನನ್ನ ಉದ್ದೇಶ. ಶಿಷ್ಯ ಬೆಳಗಬೇಕು. ಶಿಷ್ಯ ಬೆಳಗಿದರೆ ಗುರುವಾದವನ ವಿದ್ಯೆ ಸಾರ್ಥಕ” ಎಂದರು.
ಕುಮಾರಿ ಪರಿಣಿತ ವೈದ್ಯ ಕಾರ್ಯಕ್ರಮ ನಿರೂಪಿಸಿ, ಕುಮಾರಿ ದೀಪಾ ಸ್ವಾಗತಿಸಿ, ಗುರುಗಳನ್ನು ಪರಿಚಯಿಸಿದರು.
Subscribe to Updates
Get the latest creative news from FooBar about art, design and business.
Previous Articleಮನೋಹರ ಗ್ರಂಥ ಮಾಲಾದಲ್ಲಿ ರಂ. ಶಾ. ಲೋಕಾಪುರ ಅವರ ಜನ್ಮ ದಿನಾಚರಣೆ