ಮಡಿಕೇರಿ : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ‘ಕಥೆ ಹೇಳುವ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ದಿನಾಂಕ 03 ಆಗಸ್ಟ್ 2025ರಂದು ಭಾನುವಾರ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ಕಾಮಧೇನು ಗೋ ಶಾಲೆಯಲ್ಲಿ ‘ಕಥಾ ಸಮಯ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸ್ವರಚಿತ ಕಥೆ ವಾಚಿಸಲು ಮೂರರಿಂದ ಐದು ನಿಮಿಷ ಸಮಯದ ಅವಕಾಶವಿರುತ್ತದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಹೆಸರನ್ನು ದಿನಾಂಕ 25 ಜುಲೈ 2025ರೊಳಗಾಗಿ 9353531976, 91 7760908774 ಸಂಖ್ಯೆಯನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದಾಗಿದೆ.