ಪಡುಕುತ್ಯಾರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ವೃತಚಾರಣೆಯಲ್ಲಿ ‘ಹರಿಕಥಾ ಸತ್ಸಂಗ’ವನ್ನು ದಿನಾಂಕ 20 ಜುಲೈ 2025ರಂದು ಅಪರಾಹ್ನ 1-30 ಗಂಟೆಗೆ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠದಲ್ಲಿ ಆಯೋಜಿಸಲಾಗಿದೆ.
ಮಂಗಳೂರಿನ ಕುಮಾರಿ ಶ್ರದ್ಧಾ ಗುರುದಾಸ್ ಇವರಿಂದ ನಡೆಯಲಿರುವ ‘ಗುರುಭಕ್ತ ಏಕಲವ್ಯ’ ಹರಿಕಥಾ ಸತ್ಸಂಗಕ್ಕೆ ತಬ್ಲಾದಲ್ಲಿ ಪ್ರಥಮ್ ಆಚಾರ್ಯ, ಹಾರ್ಮೋನಿಯಂನಲ್ಲಿ ಡಾ. ಎಸ್.ಪಿ. ಗುರುದಾಸ್ ಮತ್ತು ಮೋರ್ಸಿಂಗ್ ನಲ್ಲಿ ಸುಧಾಮ ಆಚಾರ್ಯ ಸಹಕರಿಸಲಿದ್ದಾರೆ.