ಹುಟ್ಟಿ ಬೆಳೆದಿದ್ದು ಶೃಂಗೇರಿ. ಕಲಾವಿದರ ಮನೆತನ. ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯ, ಸಂಗೀತ, ನಾಟಕ, ರಂಗಭೂಮಿ ಹಾಗೂ ಯಕ್ಷಗಾನ ಕಲೆಯ ಮೇಲೆ ಬಹಳ ಆಸಕ್ತಿ. ಶೃಂಗೇರಿಯಲ್ಲಿ ಇವರ ತಂದೆ ಕಟ್ಟಿ ಬೆಳೆಸಿದ “ಗೆಳೆಯರ ಬಳಗ” ಎಂಬ ಒಂದು ರಂಗ ತಂಡ ಇದೆ. ಆ ತಂಡದಲ್ಲಿ ಇವರು ನಾಟಕದಲ್ಲಿ ಭಾಗಿಯಾಗುತ್ತಿದ್ದರು. ಅಲ್ಲಿಂದ ರಂಗಭೂಮಿ ಹತ್ತಿರವಾಯಿತು. ಮುಂದೆ ಬೆಂಗಳೂರಿನಲ್ಲಿ ಕಾಲೇಜ್ ವಿದ್ಯಾಭ್ಯಾಸ ಸಂದರ್ಭದಲ್ಲಿ “ಬಣ್ಣದ ಮನೆ” ಎಂಬ ಒಂದು ರಂಗ ತಂಡ ಕಟ್ಟಿ ಅನೇಕ ನಾಟಕ ಮಾಡಿದ ಕೀರ್ತಿ ಇವರದು.
ಮಲೆನಾಡಿನ ಚಿಕ್ಕಮಂಗಳೂರಿನ ಶೃಂಗೇರಿಯ ರಮೇಶ್ ಬೇಗಾರ್ ಹಾಗೂ ಭಾಗ್ಯಶ್ರೀ ಇವರ ಮಗಳಾಗಿ 26.07.2001ರಂದು ನಾಗಶ್ರೀ ಬೇಗಾರ್ ಅವರ ಜನನ.
ವಿದ್ಯಾಭ್ಯಾಸ:
ಪ್ರಾಥಮಿಕ – ಪ್ರೌಢ ಶಿಕ್ಷಣ:- ಜೆಸಿಸ್ ಶೃಂಗೇರಿ.
ಕಾಲೇಜು ಶಿಕ್ಷಣ:- ಬಿ ಜಿ ಎಸ್ ಶೃಂಗೇರಿ.
ಪದವಿ:- ಕ್ರೈಸ್ಟ್ ಬೆಂಗಳೂರು.
ಮಾಕರಸು ಅಶ್ವಥ್ ನಾರಾಯಣ ಯಕ್ಷಗಾನ ಗುರುಗಳು.
ಭಾರ್ಗವ ಶರ್ಮಾ ಭರತನಾಟ್ಯ ಗುರುಗಳು.
ಸಾವಿತ್ರಿ ಪ್ರಭಾಕರ್ ಸಂಗೀತ ಗುರುಗಳು.
ಭರತನಾಟ್ಯ ಹಾಗೂ ಸಂಗೀತ ಎರಡರಲ್ಲೂ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಇದೀಗ ಪೂರ್ಣವಾಗಿ ಆಕ್ಟಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾರೆ ನಾಗಶ್ರೀ.
ನಟಿಸಿದ ಪ್ರಮುಖ ಟಿ ವಿ ಸೀರಿಯಲ್ ಗಳು:
ಜೀ ಕನ್ನಡದಲ್ಲಿ ಪ್ರಸಾರ ಆಗುವ ಅಣ್ಣಯ್ಯ ಸೀರಿಯಲ್ ನಲ್ಲಿ ರತ್ನ ಪಾತ್ರದಿಂದ ಮನೆಮಾತಾಗಿದ್ದಾರೆ.
ನಟಿಸಿದ ಇತರೆ ಧಾರಾವಾಹಿಗಳು:-
ಮತ್ತೆ ಮನ್ವಂತರ, ಮತ್ತೆ ಮಾಯಾಮೃಗ, ಯಡೆಯೂರು ಸಿದ್ಧಲಿಂಗೇಶ್ವರ ಮಹಿಮೆ.
ನಟಿಸಿದ ಸಿನಿಮಾಗಳು:
ಜಲಪಾತ (ಸಿನಿಮಾದ ನಾಯಕ ನಟಿ), ವೈಶಂಪಾಯನ ತೀರ (ಸಹ ನಾಯಕಿ), ಬ್ಯಾಚುಲರ್ಸ್ ಪಾರ್ಟಿ, ಹುಚ್ಚಿಕ್ಕಿ ಕಿರುಚಿತ್ರದ ನಾಯಕಿ, ಊರಿನ ಗ್ರಾಮಸ್ಥರಲ್ಲಿ ವಿನಂತಿ. ಕೆಂಪಾಂಬುಧಿ ಇವರು ನಟಿಸಲಿರುವ ಸಿನಿಮಾ.
ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ:
ಮಾಕರಸು ಅಶ್ವಥ್ ನಾರಾಯಣ ಇವರ ಶಿಷ್ಯೆಯಾಗಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಕಂಸ ವಧೆಯ ಕೃಷ್ಣ, ಭೀಷ್ಮ ವಿಜಯದ ಸಾಲ್ವ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ದೇವಿ ಮಹಾತ್ಮೆಯ ಮಹಿಷಾಸುರ, ಚಕ್ರ ಚಂಡಿಕೆಯ ಕೃಷ್ಣ, ಶ್ವೇತ ಕುಮಾರ ಚರಿತ್ರೆಯ ಶ್ವೇತ ಕುಮಾರ ಸೇರಿದಂತೆ ಹೆಚ್ಚಿನ ಟೈಟಲ್ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಸಿನಿಮಾ ರಂಗದಲ್ಲಿ ಪ್ರೀತಿ ಹುಟ್ಟಿದ್ದು ಹೇಗೆ:
ನಮ್ಮೂರಿನಲ್ಲಿ ಥಿಯೇಟರ್ ಇಲ್ಲ. ಅಪ್ಪನ ಜೊತೆಗೆ ಕೊಪ್ಪಕ್ಕೆ ಹೋಗಿ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು ನಾನು. ಕ್ಯಾಮೆರಾ ಮುಂದೆ ನಿಲ್ಲುವ ಧೈರ್ಯ ಬಂದದ್ದು ಶಾರ್ಟ್ ಫಿಲಂ ಮಾಡಿದಾಗ. ಇದರಲ್ಲಿ ನನ್ನ ಅಭಿನಯ ನೋಡಿ ಅಪ್ಪ “ಜಲಪಾತ” ಸಿನಿಮಾದ ಪಾತ್ರವೊಂದಕ್ಕೆ ಆಯ್ಕೆ ಮಾಡಿದರು.
ನೀವು ಅಭಿನಯಿಸಿದ ಚಿತ್ರಗಳಲ್ಲಿ ಅಪ್ಪ ನಿರ್ದೇಶಕರಾಗಿರುವುದು ಪಾಸಿಟಿವಾ/ ನೆಗೆಟಿವಾ:
ನಿರ್ದೇಶಕರ ನಟಿ ನಾನು. ಅಪ್ಪ ನನ್ನನ್ನು ಸ್ಪೆಷಲ್ ಆಗಿ ಟ್ರೀಟ್ ಮಾಡಿಲ್ಲ. ನಾವೆಲ್ಲ ಒಂದೇ ಥಿಯೇಟರ್ ಟೀಮ್ ನವರಾದ ಕಾರಣ ಸಿನಿಮಾ ಮಾಡಿದ್ದು ಇನ್ನೊಂದು ನಾಟಕ ಪ್ರೊಡಕ್ಷನ್ ಮಾಡಿದಷ್ಟೇ ಆಪ್ತವಾಗಿತ್ತು.
ಚಲನಚಿತ್ರದ ಅಭಿನಯಕ್ಕೆ ಹಾಗೂ ಧಾರಾವಾಹಿಯ ಅಭಿನಯಕ್ಕೆ ಇರುವ ವ್ಯತ್ಯಾಸ :
ಚಲನಚಿತ್ರ ಹಾಗೂ ಧಾರಾವಾಹಿ ನಟನೆಗೆ ಇರುವ ಪ್ರಮುಖ ವ್ಯತ್ಯಾಸ ಟೈಮ್ ಪಿರೈಡ್. ಸಿನಿಮಾದಲ್ಲಿ ಅಭಿನಯಸುವಾಗ ಆ ಪಾತ್ರದಲ್ಲಿ 6 ತಿಂಗಳಿಂದ 1 ವರ್ಷದ ವರೆಗೆ ಜರ್ನಿ ಮಾಡುತ್ತೇವೆ. ಆದರೆ ಧಾರಾವಾಹಿಯಲ್ಲಿ ನಟಿಸುವಾಗ ಆ ಧಾರಾವಾಹಿಯು ಎಷ್ಟು ವರ್ಷ ಇರುತ್ತೆ ಅಷ್ಟು ವರ್ಷ ಪಾತ್ರದ ಜೊತೆಗೆ ಜೀವಿಸಬೇಕು ನಾವು.
ಅಣ್ಣಯ್ಯ ಧಾರವಾಹಿಗೆ ನಿಮ್ಮ ಆಯ್ಕೆ ಹೇಗೆ ಆಯಿತು ಹಾಗೂ ಧಾರಾವಾಹಿಯ ನಿಮ್ಮ ಅಭಿನಯಕ್ಕೆ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ:
ಎರಡು ಮೂರು ವರ್ಷಗಳಿಂದ ಸಿನಿಮಾ ಹಾಗೂ ಧಾರಾವಾಹಿಗಳಿಗೆ ಆಡಿಷನ್ ನೀಡುತ್ತಾ ಬಂದಿದ್ದೇನೆ.
ಬೆಂಗಳೂರಿಗೆ ಬಂದಾಗ ಅನೇಕ ಆಡಿಷನ್ ನೀಡಿದೆ. ಆಡಿಷನ್ ಕೊಡುವಾಗ ಟೆಸ್ಟ್ ನಲ್ಲಿ ರಿಜೆಕ್ಟ್ ಆಗುತ್ತಿತ್ತು. ಕೊಟ್ಟಿರುವ ಪಾತ್ರ ಪಾತ್ರದ ತರ ಕಣ್ಣುತ್ತಿಲ್ಲ, ತುಂಬಾ ಚಿಕ್ಕವರ ತರ ಕಾಣ್ತಾ ಇದ್ದೀರಾ.. ಹೀಗೆ ಕಾರಣ ಹೇಳಿ ರಿಜೆಕ್ಟ್ ಆಗುತ್ತಿತ್ತು. ಈ ರೀತಿಯಲ್ಲಿ ಅಣ್ಣಯ್ಯ ಧಾರವಾಹಿಗೂ ಆಡಿಷನ್ ಗೆ ಕರೆ ಬಂತು. ಆದರೆ ಆಡಿಷನ್ ಹೋಗುವುದಿಲ್ಲ ಎಂದು ಯೋಚನೆ ಮಾಡಿದೆ. ಕಾರಣ ಅನೇಕ ಆಡಿಷನ್ ರಿಜೆಕ್ಟ್ ಆಗಿದೆ ಎಂದು. ಆದರೆ ಆ ಟೈಮ್ ನಲ್ಲಿ ಜಲಪಾತ ಸಿನಿಮಾ ರಿಲೀಸ್ ಆಗಿತ್ತು. ಜಲಪಾತ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರು ಅಭಿನಯ ಮಾಡಿದ್ದರು. ಅಣ್ಣಯ್ಯ ಧಾರಾವಾಹಿಯನ್ನು ಪ್ರೊಡಕ್ಷನ್ ಮಾಡುತ್ತಿರುವವರು ಕೂಡ ಪ್ರಮೋದ್ ಶೆಟ್ಟಿ ಅವರು. ನಿನ್ನ ಅಭಿನಯ, ಎನರ್ಜಿ ಚೆನ್ನಾಗಿದೆ ನೀವು ಬಂದು ಆಡಿಷನ್ ಕೊಡಿ ಎಂದು ಹೇಳಿದರು. ಹೋಗಿ ಆಡಿಷನ್ ಕೊಟ್ಟೆ. ಧಾರಾವಾಹಿಯಲ್ಲಿ ಬೇಕಿದ್ದ ಫಸ್ಟ್ ಕ್ಯಾರೆಕ್ಟರ್ ಗೆ ಆಡಿಷನ್ ಆಯಿತು ಹಾಗೂ ಸೆಲೆಕ್ಟ್ ಆದೇ. ಈ ಪಾತ್ರವನ್ನು ನೀಡಿದ ರಾಘವೇಂದ್ರ ಹುಣಸೂರು ಹಾಗೂ ಸುಧೀಂದ್ರ ಭಾರಧ್ವಾಜ್ ಅವರಿಗೆ ಧನ್ಯವಾದಗಳು.
ಜನರ ಪ್ರತಿಕ್ರಿಯೆ ನಮ್ಮ ಧಾರಾವಾಹಿ ಹಾಗೂ ನನ್ನ ಪಾತ್ರಕ್ಕೆ ತುಂಬಾ ಚೆನ್ನಾಗಿದೆ. ನನ್ನ ಪಾತ್ರ ರತ್ನನಿಗೆ ತುಂಬಾ ಗೌರವ ಸಿಗುತ್ತಿದೆ. ನಾನು ನಾಗಶ್ರೀಯಾಗಿ ಆ ಗೌರವ ಪಡೆಯಲು ಎಷ್ಟು ವರ್ಷ ಬೇಕಿತ್ತು ಗೊತ್ತಿಲ್ಲ. ಆದರೆ ಧಾರಾವಾಹಿ ಟೆಲಿಕಾಸ್ಟ್ ಆಗಲು ಶುರುವಾಗಿ 8 ತಿಂಗಳು ಕಳೆದಿದೆ. ನನ್ನ ಪಾತ್ರಕ್ಕೆ ಜನ ಎಷ್ಟು ಗೌರವ ಕೊಡುತ್ತಾರೆ ಎಂದರೆ ಯಾರೋ ಒಬ್ಬರು ಅಜ್ಜಿ ಹೇಳಿದ್ದಾರೆ ಅಂತೆ ಹೆಣ್ಣು ಮಗು ಇದ್ದರೆ ರತ್ನನ ತರ ಇರಬೇಕು ಎಂದು ಹೇಳಿದ್ದರು ಅಂತೆ. ಇದ್ದನ್ನು ಕೇಳಿ ತುಂಬಾ ಸಂತೋಷವಾಯಿತು.
ಪ್ರಶಸ್ತಿ ಪುರಸ್ಕಾರಗಳು:
ಜೀ ಕುಟುಂಬದ ಬೆಸ್ಟ್ ಸಹೋದರಿ ಪ್ರಶಸ್ತಿ.
ಬಿ ಜೀ ಎಸ್ ಸಂಸ್ಥೆಯಿಂದ ಚುಂಚೋತ್ಸವ ಯುವ ಪುರಸ್ಕಾರ.
ಕಲ್ಕಟ್ಟೆ ಕನ್ನಡತಿ ಪ್ರಶಸ್ತಿ.
ಬಾಳೆಹೊನ್ನೂರು ಅಯ್ಯಪ್ಪ ಸಮಿತಿಯ ದೀಪೋತ್ಸವ ಪ್ರಶಸ್ತಿ.
ಜೇಸಿಸ್ ಶಾಲೆಯ ವಾರ್ಷಿಕೋತ್ಸವದ ವಿಶೇಷ ಪ್ರಶಸ್ತಿ.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ತರೀಕೆರೆಯಲ್ಲಿ ಆಯೋಜಿಸಿದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿ.
ಶೃಂಗೇರಿ ತಾಲ್ಲೂಕಿನ ಬ್ರಾಹ್ಮಣ ಮಹಾ ಸಭೆಯ ವಿಪ್ರ ಮಹಿಳಾ ಸಮಾವೇಶದಲ್ಲಿ ವಿಶೇಷ ಪ್ರಶಸ್ತಿ.
ತೀರ್ಥಹಳ್ಳಿಯ ನಮ್ಮೂರು ಎಕ್ಸ್ಪ್ರೆಸ್ ಆಯೋಜಿಸಿದ್ದ ಮಲೆನಾಡ ಉತ್ಸವದಲ್ಲಿ ಯುವ ಪ್ರಶಸ್ತಿ.
ಬಿ ಜಿ ಎಸ್ ಸಂಸ್ಥೆಯನ್ನು 2 ಬಾರಿ ರಾಜ್ಯಮಟ್ಟದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರತಿನಿಧಿಸಿರುತ್ತಾರೆ.
ಅಂತರ ಕಾಲೇಜ್ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿರುತ್ತಾರೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ನಾಗಶ್ರೀ.
ಶ್ರವಣ್ ಕಾರಂತ್ ಕೆ.,
ಶಕ್ತಿನಗರ ಮಂಗಳೂರು.