ಬೆಂಗಳೂರು : ನವದೆಹಲಿಯ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ‘ಪದ’ ಪ್ರಸ್ತುತ ಪಡಿಸುವ ಮೂರು ದಿನಗಳ ಪೌರಾಣಿಕ ರಂಗೋತ್ಸವ ಕಾರ್ಯಕ್ರಮವು ದಿನಾಂಕ 05ರಿಂದ 07 ಆಗಸ್ಟ್ 2025ರವರೆಗೆ ನಡೆಯಲಿದೆ.
ದಿನಾಂಕ 05 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ, ರವೀಂದ್ರ ಕಲಾ ಕ್ಷೇತ್ರದ ನಯನ ರಂಗಮಂದಿರದಲ್ಲಿ ಈ ಕಾರ್ಯಕ್ರಮವನ್ನು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಇವರು ಉದ್ಘಾಟನೆ ಮಾಡಲಿದ್ದು, ಕೆ.ಎ. ದಯಾನಂದ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಮತ್ತು ಪದ್ಮಶ್ರೀ ಪುರಸ್ಕೃತ ಹಾಸನ ರಘು ಇವರಿಗೆ ‘ಪದ ಗೌರವ’ ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ಎಸ್.ಎಲ್.ಎನ್. ಸ್ವಾಮಿ ಇವರ ನಿರ್ದೇಶನದಲ್ಲಿ ಗೋಕುಲ ಸಹೃದಯ ಅಭಿನಯದ ‘ಪಂಚಗವ್ಯ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 06 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಮತ್ತಲ್ಲಹಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಬಿ. ಪುಟ್ಟಸ್ವಾಮಯ್ಯ ಇವರು ರಚಿಸಿರುವ ಟಿ. ಮಂಜುನಾಥ್ ಇವರ ನಿರ್ದೇಶನದಲ್ಲಿ ‘ಶ್ರೀ ಕೃಷ್ಣ ಸಂಧಾನ’ ನಾಟಕ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರಾದ ಕಲ್ಲೂರು ಶ್ರೀನಿವಾಸ್ ಇವರಿಗೆ ‘ಪದ ಗೌರವ’ ನೀಡಿ ಸನ್ಮಾನಿಸಲಾಗುವುದು.
ದಿನಾಂಕ 07 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮತ್ತಲ್ಲಹಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಸಮಾರೋಪ ನುಡಿಗಳನ್ನಾಡಲಿದ್ದು, ಪೌರಾಡಳಿತ ಮತ್ತು ಹಜ್ಹ್ ಸಚಿವರ ಆಪ್ತ ಕಾರ್ಯದರ್ಶಿ ಡಾ. ಕೆ. ಮುರಳೀಧರ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಕೋಟೆ ಚಂದ್ರಶೇಖರ್ ಶಿರಾ ಇವರಿಗೆ ‘ಪದ ಗೌರವ’ ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಅ.ನ. ಕೃಷ್ಣರಾಯ ಇವರ ರಚನೆಯ ಡಿ.ಕೆ. ಸಿಂಧೆ ನಿರ್ದೇಶನದಲ್ಲಿ ‘ಸ್ವರ್ಣಮೂರ್ತಿ’ ನಾಟಕ ಪ್ರದರ್ಶನ ನಡೆಯಲಿದೆ.