ಉಡುಪಿ : ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ಸಪ್ತಕ ಬೆಂಗಳೂರು ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಸ್ವರ್ ಸ್ವಾದ್’ ಸಂಗೀತ ಕಛೇರಿಯನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಗಿಲಿಗುಂಡಿಯ ಕುಮಾರಿ ಸಂಗೀತ ಹೆಗ್ಡೆ ಇವರ ಹಾಡುಗಾರಿಕೆ, ತನ್ಮಯ್ ಡಿಯೊಚಾಕೆ ಇವರ ಹಾರ್ಮೋನಿಯಂ ಏಕವ್ಯಕ್ತಿ ವಾದನ ಮತ್ತು ವಿದುಷಿ ಗೌರಿ ಪತಾರೆ ಇವರ ಹಾಡುಗಾರಿಕೆಗೆ ತಬಲಾದಲ್ಲಿ ಗುರುಮೂರ್ತಿ ವೈದ್ಯ, ಆಶಾಯ್ ಕುಲಕರ್ಣಿ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗ್ಡೆ ಇವರು ಸಾಥ್ ನೀಡಲಿದ್ದಾರೆ.