ಕೊಪ್ಪಳ : ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕೊಪ್ಪಳದ ವಿಸ್ತಾರ್ ರಂಗ ಶಾಲೆ 2025-26ನೇ ಸಾಲಿನ ನಾಟಕ ವಿಭಾಗದ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಉತ್ತರ ಕರ್ನಾಟಕದ ಭಾಗದ ಏಕೈಕ ರಂಗಶಾಲೆ ಇದಾಗಿದ್ದು, ಪರಿವರ್ತನಾತ್ಮಕ ರಂಗಭೂಮಿ ಕಲಿಕೆ ಇದರ ಮುಖ್ಯ ಉದ್ದೇಶವಾಗಿದೆ. ಕಳೆದ 10 ವರ್ಷಗಳಿಂದ ನಾಟಕ ಡಿಪ್ಲೋಮದ ಜೊತೆಗೆ ವಿವಿಧ ಅಲ್ಪಾವಧಿ ರಂಗತರಬೇತಿಗಳನ್ನು ನಡೆಸುತ್ತ ಬಂದಿದೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಸೆಪ್ಟೆಂಬರ್ 2025 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535383161, 7026972770.