ಮಂಗಳೂರು : ಕಲ್ಕೂರ ಪ್ರತಿಷ್ಠಾನ (ರಿ.) ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2025ರಂದು ಹಿರಿಯ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ.ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪೆನ್ಸಿಲ್ ನಿಂದ ‘ಕಪ್ಪು-ಬಿಳುವು’ ಚಿತ್ರಗಳನ್ನು ಮಾತ್ರ ರಚಿಸಬೇಕು. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ವಿಜೇತರಿಗೆ ಬಹುಮಾನವನ್ನು ಮಂಗಳೂರಿನಲ್ಲಿ ಜರಗಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು.
ಅಂಚೆ ಕಾರ್ಡ್ ಗಳನ್ನು ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ದಿನಾಂಕ 06 ಅಕ್ಟೋಬರ್ 2025ರೊಳಗಾಗಿ ಜಾನ್ ಚಂದ್ರನ್ (ಸಂಚಾಲಕರು), ಅಂಚೆ ಕಾರ್ಡ್ ನಲ್ಲಿ ಚಿತ್ರ ರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲಪುವಂತೆ ಕಳುಹಿಸಬೇಕೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.