ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.), ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಮತ್ತು ಸಪ್ತಕ ಬೆಂಗಳೂರು ಈ ಸಂಸ್ಥೆಗಳು ಜೊತೆಯಾಗಿ ಸಂಯೋಜಿಸುವ ‘ಭೈರಪ್ಪ ನಮನ’ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ.
ಕುಮಾರಿ ನೀಹಾರಿಕ ದೇರಾಜೆ ಸುರತ್ಕಲ್ ಇವರ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನಕ್ಕೆ ತಬಲಾ ಪಡುಬಿದ್ರೆ ಶ್ರೀವತ್ಸ ಶರ್ಮ ಮತ್ತು ಮಂಗಳೂರಿನ ಕುಮಾರಿ ಮೇಧಾ ಭಟ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಡಾ. ಗಿರೀಶ್ ಭಟ್ ಅಜಕ್ಕಳ ಇವರಿಂದ ನುಡಿ ನಮನ ಹಾಗೂ ಕಿರಣ್ ಹೆಗಡೆ ಮಗೆಗಾರ ಇವರ ಬಾನ್ಸುರಿ ವಾದನಕ್ಕೆ ಭಾರವಿ ದೇರಾಜೆ ಇವರು ತಬಲಾ ಸಾಥ್ ನೀಡಲಿದ್ದಾರೆ.