ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರ ವತಿಯಿಂದ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 4-30 ಗಂಟೆಗೆ ಸಾಲಿಗ್ರಾಮ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಶ್ರೀ ಕೆ. ಚಂದ್ರಕಾಂತ ನಾಯರಿ ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ ‘ಗಾನ ನಮನ’, ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ‘ನೃತ್ಯ ವೈವಿಧ್ಯ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಎಚ್. ಶಕುಂತಳಾ ಭಟ್ ಇವರಿಗೆ ‘ಗೆಳೆಯರ ಬಳಗ ಕಾರಂತ ಪುರಸ್ಕಾರ 2025’ ಪ್ರದಾನ ನಡೆಯಲಿದೆ. ಬಳಿಕ ಶಶಿಕಾಂತ ಶೆಟ್ಟಿ ಕಾರ್ಕಳ ಇವರ ನೇತೃತ್ವದಲ್ಲಿ ಶ್ರೀದೇವಿ ಯಕ್ಷಕಲಾ ವೃಂದದ ಕಲಾವಿದರಿಂದ ‘ಶ್ರೀಕೃಷ್ಣ ತುಲಾಭಾರ’ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.